ಹಾಸನ: ಕೌಟುಂಬಿಕ ಕಲಹದಿಂದ ಪುತ್ರನೇ ತಂದೆಯನ್ನು ಕೊಲೆ ಮಾಡಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ಘಟನೆ ನಡೆದಿದೆ.
ರಾಡ್ ನಿಂದ ಹೊಡೆದು ಸತೀಶ್(60) ಅವರನ್ನು ಪುತ್ರ ರಂಜಿತ್ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದಿಂದ ಪ್ರತ್ಯೇಕವಾಗಿ ತಾಯಿ ಮಗ ವಾಸವಾಗಿದ್ದರು. ಮೈಸೂರು ಜಿಲ್ಲೆ ಕೆಆರ್ ನಗರದಲ್ಲಿ ತಾಯಿ, ಮಗ ವಾಸವಾಗಿದ್ದರು. ಇದೇ ವಿಚಾರಕ್ಕೆ ತಂದೆಯ ಜೊತೆ ಆಗಾಗ ಜಗಳ ನಡೆಯುತ್ತಿತ್ತು.
ನಿನ್ನೆ ಸಂಜೆ ಇದೇ ವಿಚಾರಕ್ಕೆ ತಂದೆ, ಮಗನ ನಡುವೆ ಜಗಳವಾಗಿದ್ದು, ಈ ವೇಳೆ ಸ್ಟೀಲ್ ರಾಡ್ ನಿಂದ ತಂದೆಯ ತಲೆಗೆ ಹೊಡೆದು ಪುತ್ರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

