ಬೆಂಗಳೂರು: ಪದೇ ಪದೇ ಸ್ಲೀಪರ್ ಕೋಚ್ ಬಸ್ ಗಳ ಅಪಘಾತ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ದೇವನಹಳ್ಳಿಯ ಆರ್.ಟಿ.ಒ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಖಾಸಗಿ ಸ್ಲೀಪರ್ ಕೋಚ್ ಬಸ್ ಗಳ ಪಾರ್ಟಿಶನ್ ಡೋರ್ ತೆರವುಗೊಳಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪ ರಾಣಿ ಕ್ರಾಸ್ ಬಳಿ ಬಸ್ ಗಳನ್ನು ತಡೆದು ಖಾಸಗಿ ಬಸ್ ಗಳ ಒಳಭಾಗದ ಡೋರ್ ತೆಗೆಸಿದ್ದಾರೆ. ಬಸ್ ಚಾಲಕ ಮತ್ತು ಪ್ರಯಾಣಿಕರ ನಡುವಿನ ಡೋರ್ ತೆರವುಗೊಳಿಸಲಾಗಿದೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ 8 ಸ್ಲೀಪರ್ ಕೋಚ್ ಬಸ್ ಗಳ ಡೋರ್ ಬಿಚ್ಚಿಸಿ ಸೀಜ್ ಮಾಡಿದ್ದಾರೆ. ದೇವನಹಳ್ಳಿ ಆರ್.ಟಿ.ಒ. ಸುಧೀರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಚಿತ್ರಕೃಪೆ: ಎಐ

