HomeLatest NewsBREAKING: ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ: ಕಾರ್ಪೆಂಟರ್ ಅರೆಸ್ಟ್

BREAKING: ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ: ಕಾರ್ಪೆಂಟರ್ ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಉಪವಿಭಾಗದ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾರ್ಪೆಂಟರ್ ಬಂಧಿಸಲಾಗಿದೆ.

ಭದ್ರಾಪುರದ 3 ನೇ ಕ್ರಾಸ್ ವಾಸಿಯಾದ ಲಕ್ಷ್ಮಣಪ್ಪ ಬಿನ್ ಮಲ್ಲಪ್ಪ, ಕಾರ್ಪೆಂಟರ್ ಕೆಲಸ ಇವರು ತಮ್ಮ ಮನೆಯ ಪಕ್ಕದಲ್ಲಿರುವ ಅವರ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡಲು ಇಟ್ಟುಕೊಂಡಿರುವ ಬಗ್ಗೆ ದಿ:-04-02-2026ರಂದು ಬಾತ್ಮೀದಾರರಿಂದ ಮಾಹಿತಿ ಬಂದೆ.

ಠಾಣಾ ಎ.ಎಸ್.ಐ ವಿಜಯ ಸ್ಥಳಕ್ಕೆ ಹೋಗಿ ಮಾಹಿತಿಯನ್ನು ಖಚಿತಪಡಿಸಿಕೊಂಡು ನೀಡಿದ ದೂರಿನ ಮೇರೆಗೆ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಮಯ 2019ರ ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಸದರಿ ಪ್ರಕರಣದಲ್ಲಿ ಆರೋಪಿತನ ಮನೆಯಲ್ಲಿ ದಾಳಿ ಮಾಡಿ ಬಂದೂಕು ಶೋಧನೆಗೆ ಮತ್ತು ಆರೋಪಿತನನ್ನು ವಶಕ್ಕೆ ಪಡೆಯಲು ಎಸ್ಪಿ ನಿಖಿಲ್ ಬಿ.,  ಹೆಚ್ಚುವರಿ ಎಸ್ಪಿಗಳಾದ ಎ.ಜಿ ಕಾರಿಯಪ್ಪ, ರಮೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೇಶವ ಕೆ.ಇ., ಮೇಲ್ವಿಚಾರಣೆಯಲ್ಲಿ, ಸಿಪಿಐ ಸಂತೋಷ್ ಎಂ. ಪಾಟೀಲ್ ನೇತೃತ್ವದಲ್ಲಿ ಪಿಎಸ್ಐ ಶರತ್ ಹೆಚ್ ಪಿ. ಹಾಗೂ ಠಾಣಾ ಸಿಬ್ಬಂದಿಗಳಾದ ಕೊಟ್ರೇಶಪ್ಪ, ನಾಗರಾಜ, ರವಿನಾಯ್ಕ, ರವಿಕುಮಾರ್‌ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು ಪ್ರಕರಣದ ಆರೋಪಿತ ಲಕ್ಷ್ಮಣಪ್ಪ(67) ಕಾರ್ಪೇಂಟರ್ ಕೆಲಸ ಈತನ ಮನೆಗೆ ಮಾನ್ಯ ನ್ಯಾಯಾಲಯದಿಂದ ಸರ್ಚ್‌ ವಾರೆಂಟ್ ಪಡೆದು ದಾಳಿ ಮಾಡಿ ಶೋಧನೆ ನಡೆಸಿ ಹಳೆಯ ಮನೆಯೊಳಗೆ ಬಚ್ಚಿಟ್ಟಿದ್ದ ಸಿಂಗಲ್ ಬ್ಯಾರಲ್‌ 7 ನಾಡಬಂದೂಕುಗಳು ಮತ್ತು ಸಂಬಂಧಿಸಿದ ಇತರೆ ವಸ್ತುಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿ ಲಕ್ಷ್ಮಣ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ. ತನಿಖಾ ತಂಡಕ್ಕೆ ಪೊಲೀಸ್ ಅಧೀಕ್ಷಕ ನಿಖಿಲ್ ಅಭಿನಂದಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular