HomeLatest NewsBREAKING : ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ -ರಶ್ಮಿಕಾ ಮಂದಣ್ಣ ಜೋಡಿ :...

BREAKING : ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ -ರಶ್ಮಿಕಾ ಮಂದಣ್ಣ ಜೋಡಿ : ಫೋಟೋ ವೈರಲ್

ದುನಿಯಾ ಡಿಜಿಟಲ್ ಡೆಸ್ಕ್ :   ತೆರೆಯ ಮೇಲಿನ ‘ಗೀತಾ-ಗೋವಿಂದಂ’ ಜೋಡಿ  ಈಗ ನಿಜ ಜೀವನದ ದಂಪತಿಗಳು ! ಕಳೆದ ಹಲವು ವರ್ಷಗಳ ರಹಸ್ಯ ಪ್ರೀತಿಗೂ ಸಿಕ್ಕಿತು ಅಧಿಕೃತ ಮುದ್ರೆ. ಉದಯಪುರದ ಅರಮನೆಯಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿ. ಕೊಡಗು ಮತ್ತು ತೆಲುಗು ಸಂಸ್ಕೃತಿಗಳ ಸುಂದರ ಸಂಗಮಕ್ಕೆ ಸಾಕ್ಷಿಯಾದ ವಿವಾಹದ ಕಂಪ್ಲೀಟ್ ಡೀಟೇಲ್ಸ್ ನಿಮಗಾಗಿ…

ಹೌದು.  ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಿಗ್ಗೆ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಸಂಪ್ರದಾಯದಂತೆ ಇವರ ವಿವಾಹ ಮಹೋತ್ಸವ ಜರುಗಿತು. ಅತ್ಯಂತ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಂಪ್ರದಾಯ ಬದ್ಧ ವಿವಾಹ: ವೇದ ಮಂತ್ರ ಘೋಷಗಳು ಮತ್ತು ಮಂಗಳ ವಾದ್ಯಗಳ ನಡುವೆ ವಿಜಯ್, ರಶ್ಮಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ವಿಜಯ್ ಮತ್ತು ರಶ್ಮಿಕಾ ನೋಡಲು ಬಹಳ ಸುಂದರವಾಗಿ ಕಾಣುತ್ತಿದ್ದರು. ವಧುವಿನ ಅಲಂಕಾರದಲ್ಲಿ ರಶ್ಮಿಕಾ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಡವ ಸಂಪ್ರದಾಯದ ಮದುವೆ: ಬೆಳಿಗ್ಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು, ಇಂದು ಸಂಜೆ 4:30 ಗಂಟೆಗೆ ರಶ್ಮಿಕಾ ಅವರ ಮೂಲದ ಕೊಡವ (ಕೊಡಗು) ಸಂಪ್ರದಾಯದ ಪ್ರಕಾರ ಮತ್ತೊಮ್ಮೆ ವಿವಾಹದ ವಿಧಿವಿಧಾನಗಳು ನಡೆಯಲಿವೆ.

ಪ್ರೀತಿಯ ಪಯಣ: ಕಳೆದ ಕೆಲವು ಸಮಯದಿಂದ ಪ್ರೀತಿಯಲ್ಲಿದ್ದ ಈ ಜೋಡಿ ಈಗ ಅಧಿಕೃತವಾಗಿ ಪತಿ-ಪತ್ನಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಈ ಹೊಸ ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ಸಿನಿಮಾ ಜರ್ನಿ: ವಿಜಯ್ ಮತ್ತು ರಶ್ಮಿಕಾ ಮೊದಲು ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಆ ಸಿನಿಮಾ ದೊಡ್ಡ ಹಿಟ್ ಆಗಿದ್ದಲ್ಲದೆ, ಅಲ್ಲಿಂದಲೇ ಇವರ ನಡುವೆ ಪ್ರೀತಿ ಮೊಳೆತಿತ್ತು ಎನ್ನಲಾಗಿದೆ. ನಂತರ ಇವರಿಬ್ಬರು ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ಮೋಡಿ ಮಾಡಿದ್ದರು.ತಮ್ಮ ಸಂಬಂಧವನ್ನು ಬಹಳ ರಹಸ್ಯವಾಗಿಟ್ಟಿದ್ದ ಈ ಜೋಡಿ, ಈಗ ಹಸೆಮಣೆ ಏರುವ ಮೂಲಕ ಅಭಿಮಾನಿಗಳ ದಶಕಗಳ ಕನಸನ್ನು ನನಸು ಮಾಡಿದ್ದಾರೆ. ವಿಜಯ್-ರಶ್ಮಿಕಾ ಅವರ ಮದುವೆಯ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular