HomeLatest NewsBREAKING : ಕರ್ನಾಟಕ 'UGCET' ಫಲಿತಾಂಶ ಪ್ರಕಟ, ಬೆಂಗಳೂರಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ |UGCET Result...

BREAKING : ಕರ್ನಾಟಕ ‘UGCET’ ಫಲಿತಾಂಶ ಪ್ರಕಟ, ಬೆಂಗಳೂರಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ |UGCET Result 2025

ಬೆಂಗಳೂರು : ಕರ್ನಾಟಕ ಯುಜಿಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಬೆಂಗಳೂರಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ.

ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತ್ಯನ್ಯ ಸಿಬಿಎಸ್ಇ ಶಾಲೆಯ ಭವೇಶ್ ಜಯಂತಿ (98.67%) ಮೊದಲ ರ್ಯಾಂಕ್ ಗಳಿಸಿದ್ದಾರೆ ಮತ್ತು . ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ ಇದರ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ (99.33%) ಎರಡನೇ ರ್ಯಾಂಕ್ ಗಳಿಸಿದ್ದಾರೆ . ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ರ್ಯಾಂಕ್ (99%) ಗಳಿಸಿದ್ದಾರೆ.

ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಬೆಳಿಗ್ಗೆ 11:30 ಕ್ಕೆ ಕೆಇಎ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ.
ಫಲಿತಾಂಶದ ಲಿಂಕ್ ಗಳು ಮಧ್ಯಾಹ್ನ 2 ಗಂಟೆಯ ನಂತರ ಲೈವ್ ಆಗುತ್ತವೆ.

https://cetonline.Karnataka.gov.in/ugcetrank2025/rank2025/checkresult.aspx & https://karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

ವಿದ್ಯಾರ್ಥಿಗಳು ಅಧಿಕೃತ ಜಾಲತಾಣ cetonline.karnataka.gov.in ಜಾಲತಾಣಕ್ಕೆ ಭೇಟಿ ನೀಡಬೇಕು.
-ಕೆಸಿಇಟಿ ಫಲಿತಾಂಶ 2025 ಎಂಬಲ್ಲಿ ಕ್ಲಿಕ್ ಮಾಡಬೇಕು.
-ನಿಮ್ಮ ನೋಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ನಮೂದಿಸಿ.
-ಈ ಬಳಿಕ ಸಬ್ ಮಿಟ್ ಬಟಲ್ ಕ್ಲಿಕ್ ಮಾಡಿದರೇ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular