HomeLatest NewsBREAKING : ರಾಜ್ಯ ಸರ್ಕಾರದ 'ಇ-ಸ್ವತ್ತು' ಸಾಫ್ಟ್'ವೇರ್ ಹ್ಯಾಕ್ ಮಾಡಿ ಖಾತೆ ತಿದ್ದುಪಡಿ : ಮೂವರು...

BREAKING : ರಾಜ್ಯ ಸರ್ಕಾರದ ‘ಇ-ಸ್ವತ್ತು’ ಸಾಫ್ಟ್’ವೇರ್ ಹ್ಯಾಕ್ ಮಾಡಿ ಖಾತೆ ತಿದ್ದುಪಡಿ : ಮೂವರು ಆರೋಪಿಗಳು ಅರೆಸ್ಟ್.!

ರಾಮನಗರ : ರಾಜ್ಯ ಸರ್ಕಾರದ ಇ-ಸ್ವತ್ತು ಸಾಫ್ಟ್ ವೇರ್ ಹ್ಯಾಕ್ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶರತ್, ನದೀಮ್ ಹಾಗೂ ದೀಪಕ್ ಎಂಬುವರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಜನರ ಅಗತ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಳೆದ ಮಾರ್ಚ್ ನಲ್ಲಿ ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಖದೀಮ ತಂಡವೂ ಸಾಕಷ್ಟು ಮಂದಿಗೆ ಅಕ್ರಮವಾಗಿ ತಿದ್ದು ಪಡಿ ಮಾಡಿಕೊಟ್ಟಿದ್ದಾರೆ.
ತಂತ್ರಾಂಶದಲ್ಲಿಅಕ್ರಮವಾಗಿ ಪ್ರವೇಶ ಮಾಡಿ, ದಾಖಲಾತಿಗಳನ್ನು ತಿದ್ದುಪಡಿ ಮಾಡುತ್ತಿದ್ದ ಮೂವರ ತಂಡವನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದ್ದು, ಕಾನೂನು ರೀತಿ ಕ್ರಮ ಜರುಗಿಸಲಾಗುತ್ತಿದೆ ಎಂದು ರಾಮನಗರ
ಎಸ್ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಇ-ಸ್ವತ್ತು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿರುವ ಸಾಫ್ಟ್ ವೇರ್ ಆಗಿದ್ದು, ಹಳ್ಳಿಗಳಲ್ಲಿ ಆಸ್ತಿ ವಂಚನೆಯನ್ನು ಕಡಿಮೆ ಮಾಡಲು ಮತ್ತು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಉದ್ದೇಶವನ್ನು ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular