ಹಾಸನ: ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಎಂಟು ವರ್ಷದ ಬಾಲಕನಿಗೆ ಹುಚ್ಚು ನಾಯಿ ಕಚ್ಚಿದೆ.
ಕರ್ತಾಳು ಗ್ರಾಮದ ಗುಣಗೌಡ(8) ಗಾಯಗೊಂಡ ಬಾಲಕ. ಗುಣಗೌಡನ ಮುಖ, ಮೈ ಕೈಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದೆ. ಚಿಕ್ಕಬೊಮ್ಮನಹಳ್ಳಿಯ ಅಜ್ಜಿ ಮನೆಗೆ ಗುಣಗೌಡ ಬಂದಿದ್ದ ವೇಳೆ ಘಟನೆ ನಡೆದಿದೆ. ಸಂಜೆ ಮನೆ ಬಳಿ ಗುಣಗೌಡ ಆಟವಾಡುವಾಗ ಹುಚ್ಚು ನಾಯಿ ದಾಳಿ ಮಾಡಿದೆ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

