ಮಂಗಳೂರು: ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ಅವಘಡ ಸಂಭವಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಳಿವೆ ಬಾಗಿಲಿನಲ್ಲಿ ನಡೆದಿದೆ.
ಮೀನುಗಾರಿಕೆ ಮುಗಿಸಿ ವಾಪಸ್ ಆಗುವಾಗ ಬೋಟ್ ನ ಕೆಳಭಾಗ ಕಲ್ಲಿಗೆ ಬಡಿದು ಬೋಟ್ ಮುಳುಗಡೆಯಾಗಿದೆ. ಇಬ್ರಾಹಿಂ ಖಲೀಂ ಎಂಬುವವರಿಗೆ ಸೇರಿದ ಪರ್ಷಿಯನ್ ಬೋಟ್ ಇದಾಗಿದೆ. ಆಳಸಮುದ್ರದಲ್ಲಿ ಮೀನುಗಾರಿಕೆಗೆಂದು ತೆರಳಿದ್ದರು.
ಬೋಟ್ ನಲ್ಲಿ 6 ಜನ ಮೀನುಗಾರರಿದ್ದರು. ಬೋಟ್ ಮುಳುಗಡೆಯಾಗುತ್ತಿದ್ದಂತೆ ಮೀನುಗಾರರು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಸದ್ಯ ಬೋಟ್ ನಲ್ಲಿದ್ದ 6 ಜನ ಮೀನುಗಾರರನ್ನು ರಕ್ಷಿಸಿ ಕರೆತರಲಾಗಿದೆ. ಬೋಟ್ ಮುಳುಗಡೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.

