HomeIndia22 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿ ಬಿದ್ದು ದುರಂತ: ಅವೇಶಷಗಳಡಿ ಸಿಲುಕಿ ಇಬ್ಬರು ದುರ್ಮರಣ;...

22 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿ ಬಿದ್ದು ದುರಂತ: ಅವೇಶಷಗಳಡಿ ಸಿಲುಕಿ ಇಬ್ಬರು ದುರ್ಮರಣ; ಐವರ ಸ್ಥಿತಿ ಗಂಭೀರ

ಮುಂಬೈ: ಗೌರಿ-ಗಣೇಶ್ ಹಬ್ಬಕ್ಕಾಗಿ ಎಲ್ಲೆಡೆ ಸಿದ್ಧತೆಗಳು ಆರಂಭವಾಗಿವೆ. ಈ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಅನಾಹುತವೊಂದು ಸಂಭವಿಸಿದೆ. ಬರೋಬ್ಬರಿ 22 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿ ಸಾಗಿಸುವಾಗ ಗಣೇಶ ಮೂರ್ತಿ ಬಿದ್ದು, ಅವಶೇಷಗಳ ಅಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದು, ಐವರು ಗಂಭೀರವಗೈ ಗಾಯಗೊಂಡಿರುವ ಘಟನೆ ನಡೆದಿದೆ.

ದಕ್ಷಿಣ ಮುಂಬೈನಲ್ಲಿ 22 ಅಡಿ ಎತ್ತರದ ‘ಭುಲೇಶ್ವರ ಚಾ ರಾಜ’ ಗಣೇಶ ಮೂರ್ತಿಯ ಆಗಮನ ಸಮಾರಂಭದ ವೇಳೆ ಈ ದುರಂತ ಸಂಭವಿಸಿದೆ. ಭುಲೇಶ್ವರದ ಜಯ್ ಅಂಬೆ ಚೌಕ್‌ನಲ್ಲಿರುವ ಕಬುತರ್ಖಾನಾ ಬಳಿಯ ಬಲರಾಮ್ ಮರ್ಚೆಂಟ್ ರಸ್ತೆಯಲ್ಲಿ ಶನಿವಾರ ರಾತ್ರಿ ಗಣೇಶ ಮೂರ್ತಿಯನ್ನು ತರುತ್ತಿದ್ದಾಗ ಈ ದುರ್ಘಟನೆ ಜರುಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೈಕುಲ್ಲಾದಿಂದ ಭುಲೇಶ್ವರಕ್ಕೆ ಕರೆದೊಯ್ಯುವಾಗ ಬೃಹತ್ ಗಣೇಶ ವಿಗ್ರಹ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರನ್ನು ಸಂಕೇತ್ ನೆವ್ಶೆ (33) ಹಾಗೂ ಬ್ರಿಜೇಶ್ ಹೇಮಂತ್ ಜೋಶಿ (30) ಎಂದು ಗುರುತಿಸಲಾಗಿದೆ. ಇನ್ನು ಗಾಯಾಳುಗಳಾದ ವೈಭವ್ ಘೇನಂದ್ (38), ಪವನ್ ಚೌರಾಸಿಯಾ (25), ಲಾವಣ್ಯ ಗಣರ್ (5), ದಿವ್ಯಾ ಗಣರ್ (7) ಮತ್ತು ಕುನಾಲ್ ಕಾಶಿದ್ (26) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 14ರಂದು ಗಣೇಶೋತ್ಸವ ಆರಂಭವಾಗಲಿದೆ. ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ 10 ದಿನಗಳ ಕಾಲ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಗಣೇಶ ಹಬ್ಬದ ಸಿದ್ಧತೆ ಹಿನ್ನೆಲೆಯಲ್ಲಿ ಬೃಹತ್ ಗಣೇಶ ಮೂರ್ತಿ ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular