HomeKarnatakaಬಣ್ಣ ಬಣ್ಣದ ಕಾಗೆ ಹಾರಿಸಿ ಜನರಿಗೆ ಟೋಪಿ ಹಾಕುವುದೇ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ; ಸಂತ್ರಸ್ತ ಕುಟುಂಬಕ್ಕೆ...

ಬಣ್ಣ ಬಣ್ಣದ ಕಾಗೆ ಹಾರಿಸಿ ಜನರಿಗೆ ಟೋಪಿ ಹಾಕುವುದೇ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ; ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲೂ ದುಡ್ದಿಲ್ಲದ ದುಸ್ಥಿತಿ: ಬಿಜೆಪಿ ಕಿಡಿ

ಬೆಂಗಳೂರು: ದಿಕ್ಕು ದೆಸೆಯಿಲ್ಲದ ನೀತಿಗಳಿಂದ ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರದ ಬಳಿ ಸಂತ್ರಸ್ಥೆ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೂ ದುಡ್ಡಿಲ್ಲ ಈಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

ಹುಬ್ಬಳ್ಳಿಯಲ್ಲಿ ಕೊಲೆಗೀಡಾಗಿದ್ದ ಅಂಜಲಿ ಅಂಬಿಗೇರ ಮನೆಗೆ ಮೇ 20 ರಂದು ಡಾ. ಪರಮೇಶ್ವರ್ ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದ್ದರು. ಚುನಾವಣೆ ನೀತಿ ಸಂಹಿತೆ ಮುಗಿದು ತಿಂಗಳು ಕಳೆಯುತ್ತಾ ಬಂದರೂ ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ಮಾತು ಮರೆತು ಹೋಗಿದೆ. ಈವರೆಗೂ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಣ್ಣ ಬಣ್ಣದ ಕಾಗೆ ಹಾರಿಸಿ ಜನರಿಗೆ ಟೋಪಿ ಹಾಕುವುದು, ವಿಶ್ವಾಸ ದ್ರೋಹ ಬಗೆಯುವುದೇ ಸಿದ್ದರಾಮಯ್ಯನವರ ಸರ್ಕಾರ ಕೊಡುವ ಗ್ಯಾರಂಟಿ. ಮೊದಲೇ ನೀಚಕೃತ್ಯದಿಂದ ನೊಂದಿರುವ ಸಂತ್ರಸ್ಥೆ ಕುಟುಂಬಕ್ಕೆ ಪರಿಹಾರ ನೀಡದಷ್ಟು ದಯನೀಯ ಸ್ಥಿತಿಗೆ ಸರ್ಕಾರ ತಲುಪಿರುವುದು ಕನ್ನಡಿಗರ ದೌರ್ಭಾಗ್ಯ ಎಂದು ಕಿಡಿಕಾರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular