HomeEntertainmentBIGGBOSS-10 : ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ : ಹೊಸ ಸ್ಪರ್ಧಿ ಎಂಟ್ರಿ..!

BIGGBOSS-10 : ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ : ಹೊಸ ಸ್ಪರ್ಧಿ ಎಂಟ್ರಿ..!

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ( BIGGBOSS-10)  ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹೊಸ ಅತಿಥಿ ಎಂಟ್ರಿಯಾಗಿದ್ದಾರೆ.

ಕಳೆದ ವಾರ ವೀಕೆಂಡ್ ಎಪಿಸೋಡ್ ಟೈಮಲ್ಲಿ ನಾನು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಹೋಗುತ್ತೇನೆ ಎಂದು ವರ್ತೂರು ಸಂತೋಷ್ ದೊಡ್ಡ ಶಾಕ್ ನೀಡಿದ್ದರು. ಹೊರಗಡೆ ನಡೆದ ಘಟನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನು ಷೋ ದಿಂದ ಹೊರಗೆ ಹೋಗುತ್ತೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು.

ಆದರೆ ನಿರೂಪಕ ಸುದೀಪ್ ಇದಕ್ಕೆ ಒಪ್ಪದೇ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಅಲ್ಲದೇ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರೂ ಕೂಡ ವರ್ತೂರು ಸಂತೋಷ್ ಅವರನ್ನು ಮನೆಯಿಂದ ಹೊರಕ್ಕೆ ಹೋಗದಂತೆ ಮನವೊಲಿಸಲು ಯತ್ನಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಬಿಗ್ ಬಾಸ್ ಮನೆಗೆ ನಿರೂಪಕಿ ಹಾಗೂ ನಟಿ ಸುಷ್ಮಾ ಕೆ ರಾವ್ ಆಗಮಿಸಿದ್ದಾರೆ. ಹಲವು ರಿಯಾಲಿಟಿ ಶೋ, ಸೀರಿಯಲ್ ಮೂಲಕ ಮನೆ ಮಾತಾದ ಸುಷ್ಮಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಸುಷ್ಮಾ ಕೂಡ ವರ್ತೂರು ಸಂತೋಷ್ ಜೊತೆ ಮಾತನಾಡಿದ್ದು, ಅವರನ್ನು ಮನೆಯೊಳಗೆ ಇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂದಹಾಗೆ ಸುಷ್ಮಾ ಅತಿಥಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular