
ಇದರ ನಡುವೆ ಸರ್ಕಾರ ಬಿ.ವೈ ವಿಜಯೇಂದ್ರಗೆ ಬೆಂಗಾವಲು ವಾಹನ, ಪೊಲೀಸ್ ಭದ್ರತೆ ನೀಡಿದೆ. ಭಾನುವಾರದಿಂದ ಮೂವರು ಪೊಲೀಸ್ ಸಿಬ್ಬಂದಿ ಇರುವ ಬೆಂಗಾವಲು ವಾಹನ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ. ಪದಗ್ರಹಣ ಬಳಿಕ ಅಧಿಕೃತವಾಗಿ ಸಿಬ್ಬಂದಿ ಸಹಿತ ಬೆಂಗಾವಲು ವಾಹನವನ್ನು ಸರ್ಕಾರ ಒದಗಿಸಲಿದೆ. ಪದಗ್ರಹಣಕ್ಕೆ ದಿನಾಂಕ ನಿಗದಿಯಾಗಿದ್ದು, ನವೆಂಬರ್ 15 ರಂದೇ ಕಾರ್ಯಕ್ರಮ ಫೈನಲ್ ಆಗಿದೆ.
ಇಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಭೇಟಿ ಬಳಿಕ ಬಿ.ವೈ.ವಿಜಯೇಂದ್ರ ಮಾಜಿ ಸಿಎಂ ಎಸ್.ಎಂ.ಕೃಷ್ಣ ಭೇಟಿಯಾಗಿ ಚರ್ಚೆ ನಡೆಸಿದರು.

