HomeEntertainment'ಬಿಗ್ ಬಾಸ್‌' ಮೊದಲ ಟಾಸ್ಕ್‌ನಲ್ಲೇ ಟ್ವಿಸ್ಟ್‌; 8 ಮಂದಿಗೆ ದೊಡ್ಮನೆ ಪ್ರವೇಶ, ಉಳಿದವರಿಗೆ ಶಾಕ್!

‘ಬಿಗ್ ಬಾಸ್‌’ ಮೊದಲ ಟಾಸ್ಕ್‌ನಲ್ಲೇ ಟ್ವಿಸ್ಟ್‌; 8 ಮಂದಿಗೆ ದೊಡ್ಮನೆ ಪ್ರವೇಶ, ಉಳಿದವರಿಗೆ ಶಾಕ್!

ಬೆಂಗಳೂರು: ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ಭರ್ಜರಿಯಾಗಿ ಆರಂಭವಾಗಿದೆ. ಸೆಪ್ಟೆಂಬರ್ 6ರಂದು ನಡೆದ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಮನೆಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ದೊಡ್ಮನೆ ತಲುಪುವ ಮುನ್ನವೇ ಸ್ಪರ್ಧಿಗಳಿಗೆ ಬಿಗ್ ಬಾಸ್ ಮೊದಲ ಟಾಸ್ಕ್ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಈ ಬಾರಿ ವಿಶೇಷವಾಗಿ ವಿಮಾನದಲ್ಲೇ ಮೊದಲ ಟಾಸ್ಕ್‌ ನೀಡಲಾಗಿತ್ತು. ಕಿಚ್ಚ ಸುದೀಪ್‌ ಅವರು 16 ಸ್ಪರ್ಧಿಗಳಿಗೆ ಬೋರ್ಡಿಂಗ್ ಪಾಸ್ ನೀಡಿ ವಿಮಾನದಲ್ಲಿ ಕಳುಹಿಸಿದ್ದರು. ವಿಮಾನ ಪ್ರಯಾಣದ ವೇಳೆ ಸ್ಪರ್ಧಿಗಳು ಪರಸ್ಪರ ಪರಿಚಯ ಮಾಡಿಕೊಂಡು ಒಂದು ದಿನ ಕಳೆದರು.

ಏನಿತ್ತು ಮೊದಲ ಟಾಸ್ಕ್?

ಸ್ಪರ್ಧಿಗಳು ತಮ್ಮ ಸಹಪ್ರಯಾಣಿಕರನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಪರೀಕ್ಷಿಸಲು ಬಿಗ್ ಬಾಸ್ ವಿಭಿನ್ನ ಟಾಸ್ಕ್ ನೀಡಿದರು. ತಮಗೆ ಇಷ್ಟವಾದ ಸಹಪ್ರಯಾಣಿಕರಿಗೆ ಹೂವಿನ ಹಾರ ಹಾಕಬೇಕು. ಇಷ್ಟವಾಗದ ಸ್ಪರ್ಧಿಯ ಫೋಟೋವನ್ನು ಸೂಟ್‌ಕೇಸ್‌ಗೆ ಅಂಟಿಸಿ ಅವರನ್ನು ವಿಮಾನದಿಂದ ಹೊರಹಾಕಬೇಕು ಎಂಬುದು ಟಾಸ್ಕ್‌ನ ನಿಯಮವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ 8 ಮಂದಿ ಗೆದ್ದರು

ಮೊದಲ ಟಾಸ್ಕ್‌ನಲ್ಲಿ ಜಗದೀಶ್‌, ತಾಂಡವ್ ರಾಮ್‌, ಓಂ ಪ್ರಕಾಶ್‌, ಕಾವ್ಯ ಗೌಡ, ಸಂಗೀತಾ, ಗಗನ್‌, ಆಸಿಯಾ ಮತ್ತು ಯಶಸ್‌ ಗೆಲುವು ಸಾಧಿಸಿದ್ದಾರೆ.

ಈ ಎಂಟು ಸ್ಪರ್ಧಿಗಳು ಸಹಪ್ರಯಾಣಿಕರಿಂದ ಹೂಮಾಲೆ ಪಡೆದು, ಸೂಟ್‌ಕೇಸ್‌ ಕಿಕ್‌ನಿಂದ ಪಾರಾಗಿದ್ದಾರೆ. ಹೀಗಾಗಿ ಇವರ ವಿಮಾನ ಪ್ರಯಾಣ ಅಂತ್ಯಗೊಂಡಿದ್ದು, ಬಿಗ್ ಬಾಸ್‌ ದೊಡ್ಮನೆಗೆ ಅಧಿಕೃತವಾಗಿ ಎಂಟ್ರಿ ಸಿಕ್ಕಿದೆ.

ಸೋತವರಿಗೆ ಬಿಗ್ ಬಾಸ್‌ ಶಾಕ್!

ಇನ್ನು ಮೊದಲ ಟಾಸ್ಕ್‌ನಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ ಉಳಿದ ಸ್ಪರ್ಧಿಗಳಿಗೆ ಬಿಗ್ ಬಾಸ್‌ ಮತ್ತೊಂದು ಶಾಕ್ ನೀಡಿದ್ದಾರೆ. ಅವರು ಇನ್ನೊಂದು ದಿನ ವಿಮಾನದಲ್ಲೇ ಪ್ರಯಾಣ ಮುಂದುವರಿಸುವ ಶಿಕ್ಷೆಗೆ ಗುರಿಯಾಗಿದ್ದಾರೆ.ಹೀಗಾಗಿ ದೊಡ್ಮನೆ ಪ್ರವೇಶಕ್ಕೂ ಮುನ್ನವೇ ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಗಳ ನಡುವೆ ಆಟ, ಸ್ನೇಹ, ಭಿನ್ನಾಭಿಪ್ರಾಯ ಮತ್ತು ಪೈಪೋಟಿಗೆ ಚಾಲನೆ ಸಿಕ್ಕಿದೆ.

ಸ್ಪರ್ಧಿಗಳಿಗೆ ಜೋಡಿ ಸೀಟ್ ವ್ಯವಸ್ಥೆ

ಬಿಗ್ ಬಾಸ್ ಫ್ಲೈಟ್‌ನಲ್ಲಿ ಸ್ಪರ್ಧಿಗಳನ್ನು ಜೋಡಿಯಾಗಿ ಕುಳ್ಳಿರಿಸಲಾಗಿದೆ. ತಾಂಡವ್ ರಾಮ್-ಕಾವ್ಯ ಮುನಿರಾಜು ಗೌಡ, ಸಂಗೀತಾ ಭಟ್-ಲಿಖಿತ್ ಗೊಂದಿ, ಸೌಂದರ್ಯ-ಜಗ್ಗ ಮಮ್ಮಿ, ಪ್ರಥಮಾ ಪ್ರಸಾದ್-ಕಿರಣ್ ಶಾಸ್ತ್ರಿ ಸೇರಿದಂತೆ ಹಲವು ಜೋಡಿಗಳನ್ನು ರಚಿಸಲಾಗಿದೆ.

ಬಿಗ್ ಬಾಸ್ ಫ್ಲೈಟ್‌ಗೆ ಬಂದ ಮಗು!

ಮೊದಲ ದಿನದ ಪ್ರಮುಖ ಟಾಸ್ಕ್‌ಗಳಲ್ಲಿ ಒಂದಾಗಿ ಮಗುವಿನ ಅಳುವನ್ನು ನಿಲ್ಲಿಸುವ ಸವಾಲು ನೀಡಲಾಗಿದೆ. ಅಳುತ್ತಿರುವ ಮಗುವಿನ ಗೊಂಬೆಯನ್ನು ಫ್ಲೈಟ್‌ಗೆ ಕಳುಹಿಸಿ, ಅದನ್ನು ಸಮಾಧಾನಪಡಿಸಿ ನಗಿಸುವಂತೆ ಸ್ಪರ್ಧಿಗಳಿಗೆ ಸೂಚಿಸಲಾಗಿದೆ.

ತಾಂಡವ್ ರಾಮ್ ಮತ್ತು ಸೌಂದರ್ಯ ಶೆಟ್ಟಿ ಸೇರಿದಂತೆ ಕೆಲವರು ಮಗುವನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಮಗು ಸುಲಭವಾಗಿ ಸುಮ್ಮನಾಗಲಿಲ್ಲ. ಕೊನೆಗೆ ಗೊಂಬೆ ಸಂಗೀತಾ ಭಟ್ ಅವರ ಮಡಿಲಿಗೆ ಬಂದಾಗ, ಅವರು ತಾಯಿಯಂತೆ ಅದನ್ನು ಸಂತೈಸಿದ್ದಾರೆ. ಸಂಗೀತಾ ಅವರ ಪ್ರಯತ್ನಕ್ಕೆ ಮಗು ನಗುವ ಮೂಲಕ ಪ್ರತಿಕ್ರಿಯಿಸಿದೆ.

ಮೊದಲ ದಿನವೇ ಕುತೂಹಲ ಮೂಡಿಸಿದ ಟಾಸ್ಕ್

ಬಿಗ್ ಬಾಸ್ ಕನ್ನಡ ಸೀಸನ್‌ 13ರ ಆರಂಭದಲ್ಲೇ ವಿಭಿನ್ನ ಟಾಸ್ಕ್‌ಗಳ ಮೂಲಕ ಸ್ಪರ್ಧಿಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತಿದೆ. ಅದರಲ್ಲೂ ಮಗುವಿನ ಅಳು ನಿಲ್ಲಿಸಿ ನಗಿಸುವ ಟಾಸ್ಕ್‌ ಮೊದಲ ದಿನದ ಪ್ರಮುಖ ಹೈಲೈಟ್‌ ಆಗಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಿಗಳಿಗೆ ಇನ್ನಷ್ಟು ವಿಭಿನ್ನ ಸವಾಲುಗಳು ಎದುರಾಗುವ ನಿರೀಕ್ಷೆಯಿದೆ.

 https://www.instagram.com/colorskannadaofficial/reel/Dc_uCbEiCsF/

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular