HomeKarnatakaಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ : ದುಪ್ಪಟ್ಟಾಯ್ತು ಖಾಸಗಿ ಬಸ್ ಗಳ ಟಿಕೆಟ್ ದರ

ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ : ದುಪ್ಪಟ್ಟಾಯ್ತು ಖಾಸಗಿ ಬಸ್ ಗಳ ಟಿಕೆಟ್ ದರ

ಬೆಂಗಳೂರು : ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಗಳ ಟಿಕೆಟ್ ದರ ದುಪ್ಪಟ್ಟಾಗಿದೆ.

ಹೌದು, ಶಕ್ತಿ ಯೋಜನೆ ಜಾರಿಗೆ ಬಂದ ಹಿನ್ನೆಲೆ ಖಾಸಗಿ ಬಸ್ ಗಳು ನಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆ ಹಬ್ಬದ ವೇಳೆಯಲ್ಲಿ ಧಿಡೀರ್ ಆಗಿ ಟಿಕೆಟ್ ಬೆಲೆ ಏರಿಸಿದೆ. ಈ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.
ಗೌರಿ ಗಣೇಶ ಹಬ್ಬವಿರುವುದರಿಂದ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳೋಕೆ ಕಾತುರರಾಗಿದ್ದು, ಟಿಕೆಟ್ ಬುಕ್ ಮಾಡೋಕೆ ಮುಗಿಬಿದ್ದಿದ್ದಾರೆ. ಮಾನ್ಯ ದಿನಗಳಲ್ಲಿ 500-700 ರೂ ಇದ್ದ ಟಿಕೆಟ್, ಇದೀಗ ಹಬ್ಬ ಇರುವ ಕಾರಣಕ್ಕೆ 1500 – 2500 ರೂ ಹೆಚ್ಚಳವಾಗಿದ್ದು, ಆನ್ಲೈನ್ ಟಿಕೆಟ್ ಬುಕಿಂಗ್ ದರ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಳವಾಗಿದೆ.

ಸದ್ಯ. ಬೆಂಗಳೂರು-ಉಡುಪಿ-880-1050 ರೂ ಟಿಕೆಟ್ ದರವಿದ್ದು, ಬೆಂಗಳೂರು-ಬಳ್ಳಾರಿ-999 ರಿಂದ 1449 ರೂ ಇದೆ. ಬೆಂಗಳೂರು-ಬೆಳಗಾವಿ-1200 ರಿಂದ 2000 ರೂ. ಇದೆ. ಬೆಂಗಳೂರು-ರಾಯಚೂರು-850 ರಿಂದ 1110 ರೂ ಗೆ ಏರಿಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗಾಗಲೇ ಸರ್ಕಾರ ದರ ಹೆಚ್ಚಳ ಮಾಡದಂತೆ ಖಾಸಗಿ ಬಸ್ ಹಾಗೂ ವಾಹನಗಳಿಗೆ ಖಡಕ್ ಸೂಚನೆ ನೀಡಿದೆ. . ಆದರೆ ಶಕ್ತಿ ಯೋಜನೆ ಜಾರಿಬಂದಾಗಿನಿಂದ ನಾವು ನಷ್ಟದಲ್ಲಿದ್ದೇವೆ, ದರ ಹೆಚ್ಚಳ ಮಾಡದೇ ಹೋದರೆ ಬಸ್ ಗಳನ್ನು ಓಡಿಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular