ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಟಿಕೆಟ್ ದರ ಏರಿಕೆಗೆ ಬಿಎಂಆರ್ ಸಿಎಲ್ (BMRCL) ಗ್ರೀನ್ ಸಿಗ್ನಲ್ ನೀಡಿದೆ.
ಹೌದು. ‘ಬಿಎಂಆರ್ ಸಿ ಎಲ್’ (BMRCL) ಬೋರ್ಡ್ ಮೀಟಿಂಗ್ ನಲ್ಲಿ ದರ ಏರಿಕೆಗೆ ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರದ ಅನುಮತಿಗೆ ಕಾಯುತ್ತಿದೆ. ಈ ಬಾರಿ ಶೇ.5 ರಷ್ಟು ಟಿಕೆಟ್ ದರ ಏರಿಕೆಗೆ ‘ಬಿಎಂಆರ್ ಸಿ ಎಲ್ ‘ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದರ ನಿಗದಿ ಸಮಿತಿಯ (FFC) ಶಿಫಾರಸಿನಂತೆ ಪ್ರತಿ ವರ್ಷ ಶೇಕಡಾ 5 ರಷ್ಟು ದರ ಏರಿಕೆ ಮಾಡಲು BMRCL ಉದ್ದೇಶಿಸಿದೆ.ಫೆಬ್ರವರಿ 2026 ರಿಂದಲೇ ಈ ಹೊಸ ದರಗಳು ಅನ್ವಯವಾಗುವ ಸಾಧ್ಯತೆಯಿದೆ.ಪ್ರಯಾಣಿಕರ ಮೇಲಾಗುವ ಪರಿಣಾಮ:
ಉದಾಹರಣೆಗೆ, ಈಗಿರುವ 100 ರೂ. ಟಿಕೆಟ್ ದರ 105 ರೂ. ಗೆ ಏರಿಕೆಯಾಗಲಿದೆ.60 ರೂ. ಇರುವ ದರ 63 ರೂ. ಗೆ ಏರಿಕೆಯಾಗಬಹುದು.ಕನಿಷ್ಠ ದರದಲ್ಲಿ ಬದಲಾವಣೆ ಇಲ್ಲದಿದ್ದರೂ, ದೀರ್ಘಾವಧಿಯ ಪ್ರಯಾಣದ ಸ್ಲ್ಯಾಬ್’ಗಳಲ್ಲಿ ಬದಲಾವಣೆಯಾಗಲಿದೆ.
ಕಳೆದ ವರ್ಷವಷ್ಟೇ (ಫೆಬ್ರವರಿ 2025) ಮೆಟ್ರೋ ದರಗಳನ್ನು ಶೇ. 71 ರಷ್ಟು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. ಇದರಿಂದ ನಮ್ಮ ಮೆಟ್ರೋ ಈಗಾಗಲೇ ದೇಶದ ಅತ್ಯಂತ ದುಬಾರಿ ಮೆಟ್ರೋ ಎಂಬ ಹೆಸರನ್ನು ಪಡೆದಿದೆ. ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.

