ಚಿತ್ರದುರ್ಗ: ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನನ್ನು ಭರಮಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯರನ್ನು ಕೊಠಡಿಗೆ ಕರೆಸಿಕೊಂಡು ಮೈಮುಟ್ಟುವುದು, ಮುತ್ತು ಕೊಡುವುದನ್ನು ಶಿಕ್ಷಕ ಮಾಡುತ್ತಿದ್ದ. ಈತನ ವರ್ತನೆ ಬಗ್ಗೆ ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು. ಮುಖ್ಯ ಶಿಕ್ಷಕರು ಆಡಳಿತ ಮಂಡಳಿಯವರಿಗೆ ವಿಷಯ ತಿಳಿಸಿದ್ದರು. ಪರಿಶೀಲನೆ ನಡೆಸಿದ ಆಡಳಿತ ಮಂಡಳಿ ಆರೋಪಿ ಶಿಕ್ಷಕನನ್ನು ಅಮಾನತು ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿದ್ದಾರೆ.

