ದೇಶಾದ್ಯಂತ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶಾಕ್ ನೀಡಿದೆ. ಫಾಸ್ಟ್ಯಾಗ್ (FASTag) ವಾರ್ಷಿಕ ಪಾಸ್ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ದೇಶಾದ್ಯಂತ ಇರುವ ಕೋಟ್ಯಂತರ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಏರಿಕೆ ಮಾಡಲಿದೆ.
ವಾರ್ಷಿಕ ಪಾಸ್ ಬೆಲೆಯಲ್ಲಿ ಶೇ. 2.5 ರಷ್ಟು ಹೆಚ್ಚಳ ಮಾಡಲಾಗಿದ್ದು, ಪ್ರಸ್ತುತ ಇರುವ ₹3,000 ದರವು ಏಪ್ರಿಲ್ 1 ರಿಂದ ₹3,075 ಕ್ಕೆ ಏರಿಕೆಯಾಗಲಿದೆ. ಇದು ಟೋಲ್ ದರಗಳ ವಾರ್ಷಿಕ ಪರಿಷ್ಕರಣೆಯ ಭಾಗವಾಗಿದೆ. ಫಾಸ್ಟ್ಯಾಗ್ ಬಳಕೆದಾರರಿಗೆ ಒಂದು ಸುವರ್ಣಾವಕಾಶವಿದ್ದು, ಮಾರ್ಚ್ 31ರ ಒಳಗೆ ರೀಚಾರ್ಜ್ ಮಾಡಿಕೊಂಡರೆ ಹಳೆಯ ದರದಲ್ಲೇ ಅಂದರೆ ₹3,000ಕ್ಕೆ ಪಾಸ್ ಪಡೆಯಬಹುದು. ಏಪ್ರಿಲ್ ಆರಂಭದ ನಂತರ ಹೆಚ್ಚುವರಿ ₹75 ಪಾವತಿಸುವುದು ಅನಿವಾರ್ಯವಾಗಲಿದೆ.
ದರ ಏರಿಕೆ ವಿವರ:
- ಪ್ರಸ್ತುತ ದರ: ₹3,000
- ಹೆಚ್ಚಳದ ಪ್ರಮಾಣ: ಶೇ. 2.5
- ಹೊಸ ದರ: ₹3,075
- ಜಾರಿ ದಿನಾಂಕ: ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರಲಿವೆ.
ಪ್ರತಿ ವರ್ಷ ನಡೆಯುವ ಟೋಲ್ ದರಗಳ ಪರಿಷ್ಕರಣೆಯ ಭಾಗವಾಗಿ ಈ ಬಾರಿ ಶೇ. 2.5 ರಷ್ಟು ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 31 ರ ಒಳಗೆ ರೀಚಾರ್ಜ್ ಮಾಡಿದರೆ ಲಾಭ!
ಫಾಸ್ಟ್ಯಾಗ್ ಬಳಕೆದಾರರು ಮಾರ್ಚ್ 31ರ ಒಳಗೆ ತಮ್ಮ ವಾರ್ಷಿಕ ಪಾಸ್ ರೀಚಾರ್ಜ್ ಮಾಡಿಕೊಂಡರೆ ಹಳೆಯ ದರದಲ್ಲೇ ಅಂದರೆ ₹3,000 ಕ್ಕೆ ಪಾಸ್ ಪಡೆಯಬಹುದು. ಏಪ್ರಿಲ್ 1 ರಿಂದ ರೀಚಾರ್ಜ್ ಮಾಡುವವರು ₹3,075 ಪಾವತಿಸಬೇಕಾಗುತ್ತದೆ.
ವಾರ್ಷಿಕ ಪಾಸ್ನ ವಿಶೇಷತೆಗಳು:
- ಈ ಪಾಸ್ ಪಡೆದರೆ ದೇಶಾದ್ಯಂತ ಒಂದು ವರ್ಷದ ಅವಧಿಗೆ ಅಥವಾ 200 ಟೋಲ್ ಪ್ಲಾಜಾಗಳಲ್ಲಿ ತಡೆರಹಿತವಾಗಿ ಸಂಚರಿಸಬಹುದು (ಯಾವುದು ಮೊದಲು ಬರುತ್ತದೋ ಅದು).
- ಒಂದು ವರ್ಷದ ಅವಧಿಯಲ್ಲಿ ಎಷ್ಟು ಬಾರಿಯಾದರೂ ರೀಚಾರ್ಜ್ ಮಾಡಿಕೊಳ್ಳಲು ಅವಕಾಶವಿದೆ.
- 2026 ರ ಆಗಸ್ಟ್ 15 ರಂದು ಆರಂಭವಾದ ಈ ವಾರ್ಷಿಕ ಪಾಸ್ ವ್ಯವಸ್ಥೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಈವರೆಗೆ ಸುಮಾರು 52 ಲಕ್ಷಕ್ಕೂ ಹೆಚ್ಚು ವಾಹನ ಸವಾರರು ಇದರ ಸೌಲಭ್ಯ ಪಡೆಯುತ್ತಿದ್ದಾರೆ.
ಆನ್ಲೈನ್ನಲ್ಲಿ ಪಾಸ್ ಪಡೆಯುವುದು ಹೇಗೆ?
- ರಾಜಮಾರ್ಗ ಯಾತ್ರಾ (Rajmarg Yatra) ಆ್ಯಪ್ ಅಥವಾ NHAI ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ.
- ವಾಹನ ನೋಂದಣಿ ಸಂಖ್ಯೆ ಮತ್ತು ಫಾಸ್ಟ್ಯಾಗ್ ವಿವರಗಳೊಂದಿಗೆ ಲಾಗಿನ್ ಆಗಿ.
- ಯುಪಿಐ (UPI) ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹೊಸ ದರ ₹3,075 ಪಾವತಿಸಿ (ಮಾರ್ಚ್ 31ರೊಳಗೆ ಮಾಡಿದರೆ ₹3,000).
- ಪಾವತಿ ಪೂರ್ಣಗೊಂಡ 24 ಗಂಟೆಗಳಲ್ಲಿ ನಿಮ್ಮ ಪಾಸ್ ಸಕ್ರಿಯಗೊಳ್ಳುತ್ತದೆ (Activate).

