HomeLatest NewsBIG NEWS : ಜನಸಾಮಾನ್ಯರಿಗೆ ಬಿಗ್ ಶಾಕ್ ; ಪ್ಯಾರಸಿಟಮಾಲ್ ಸೇರಿ 800+ ಔಷಧಿಗಳ ದರ...

BIG NEWS : ಜನಸಾಮಾನ್ಯರಿಗೆ ಬಿಗ್ ಶಾಕ್ ; ಪ್ಯಾರಸಿಟಮಾಲ್ ಸೇರಿ 800+ ಔಷಧಿಗಳ ದರ ಹೆಚ್ಚಳ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಸಗಟು ಬೆಲೆ ಸೂಚ್ಯಂಕದಲ್ಲಿನ (WPI) ಬದಲಾವಣೆಗೆ ಅನುಗುಣವಾಗಿ ಅಗತ್ಯ ಔಷಧಿಗಳ ಬೆಲೆಯನ್ನು ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಲು ಅನುಮೋದನೆ ನೀಡಿದೆ. ಮಾತ್ರೆಗಳ ಬೆಲೆ ಶೇ.15 ರಿಂದ 20 ರಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೌದು.   ಜ್ವರಕ್ಕೆ ಬಳಸುವ ಪ್ಯಾರಸಿಟಮಾಲ್, ಸೋಂಕು ನಿವಾರಕ ಆಂಟಿಬಯೋಟಿಕ್‌ಗಳಾದ ಅಜಿತ್ರೊಮೈಸಿನ್, ಸಿಪ್ರೊಫ್ಲೋಕ್ಸಾಸಿನ್, ನೋವು ನಿವಾರಕಗಳು, ಮಧುಮೇಹ (Diabetes), ರಕ್ತದೊತ್ತಡ (BP) ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಅಗತ್ಯ ಔಷಧಿಗಳ ಬೆಲೆ ಹೆಚ್ಚಾಗಲಿದೆ. ಮತ್ತೊಂದೆಡೆ ಮಾತ್ರೆಗಳನ್ನು ಪ್ಯಾಕ್ ಮಾಡಲು ಬಳಸುವ ಅಲ್ಯೂಮಿನಿಯಂ ಫಾಯಿಲ್ (Aluminium Foil) ಮತ್ತು ಪಿವಿಸಿ (PVC) ನಂತಹ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.

ಬೆಲೆ ಏರಿಕೆ ಪ್ರಮಾಣ: ಈ ಬಾರಿ ಬೆಲೆ ಏರಿಕೆಯು ಸುಮಾರು 0.65% ರಷ್ಟಿರಲಿದೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿದ್ದರೂ, ನಿರಂತರವಾಗಿ ಔಷಧೋಪಚಾರ ಪಡೆಯುವವರಿಗೆ ಇದು ಹೊರೆಯಾಗಲಿದೆ.ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ಔಷಧ ತಯಾರಿಕಾ ವೆಚ್ಚ ಹೆಚ್ಚಾಗಿದೆ ಎಂದು ಹೇಳಲಾಗಿದೆ.ಸುಮಾರು 800 ರಿಂದ 900 ರಷ್ಟು ಔಷಧಿಗಳ ಗರಿಷ್ಠ ಮಾರಾಟ ದರದಲ್ಲಿ (MRP) ಈ ಬದಲಾವಣೆ ಕಂಡುಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಔಷಧ ಲಭ್ಯತೆ ಭೀತಿ: ಈ ಸಮಸ್ಯೆ ಹೀಗೆಯೇ ಮುಂದುವರಿದರೆ, ಮುಂದಿನ ಕೆಲವು ವಾರಗಳಲ್ಲಿ ಮಾರುಕಟ್ಟೆಯಲ್ಲಿ ಅಗತ್ಯ ಮಾತ್ರೆಗಳು ಮತ್ತು ಕ್ಯಾಪ್ಸುಲ್‌ಗಳ ಕೊರತೆ ಎದುರಾಗಬಹುದು. ವಿಶೇಷವಾಗಿ ದೀರ್ಘಕಾಲದ ಕಾಯಿಲೆಗಳಿಗೆ (ರಕ್ತದೊತ್ತಡ, ಮಧುಮೇಹ) ಬಳಸುವ ಔಷಧಿಗಳ ಪೂರೈಕೆಯ ಮೇಲೆ ಇದು ನೇರ ಪರಿಣಾಮ ಬೀರಲಿದೆ.

ಬೆಲೆ ಏರಿಕೆಯ ಪಟ್ಟಿ (ಅಂದಾಜು):

  1. ಪ್ಯಾರಸಿಟಮಾಲ್ (ಜ್ವರಕ್ಕೆ): ಸ್ವಲ್ಪ ಪ್ರಮಾಣದ ಏರಿಕೆ.
  • ಅಜಿತ್ರೊಮೈಸಿನ್ (ಆಂಟಿಬಯೋಟಿಕ್): ಬ್ಯಾಕ್ಟೀರಿಯಾ ಸೋಂಕಿನ ಚಿಕಿತ್ಸೆಗೆ ಬಳಸುವ ಮಾತ್ರೆಗಳು.
  • ವಿಟಮಿನ್ ಮತ್ತು ಮಿನರಲ್ಸ್: ಪೌಷ್ಟಿಕಾಂಶದ ಕೊರತೆಗೆ ಬಳಸುವ ಔಷಧಿಗಳು.
  • ಜೀವಕೋಶ ರಕ್ಷಕ ಔಷಧಿಗಳು: ಗಂಭೀರ ಕಾಯಿಲೆಗಳಿಗೆ ಬಳಸುವ ಇಂಜೆಕ್ಷನ್‌ಗಳು ಮತ್ತು ಮಾತ್ರೆಗಳು.

ಇಂದಿನಿಂದಲೇ (ಏಪ್ರಿಲ್ 1) ಈ ಹೊಸ ದರಗಳು ಜಾರಿಗೆ ಬರಲಿದ್ದು, ಜನಸಾಮಾನ್ಯರ ಮಾಸಿಕ ಆರೋಗ್ಯ ವೆಚ್ಚದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

ಉದ್ಯಮದ ಆತಂಕ:

ಭಾರತೀಯ ಔಷಧ ತಯಾರಕರ ಸಂಘದ (IDMA) ಪದಾಧಿಕಾರಿಯೊಬ್ಬರು, “ನಮ್ಮ ಬಳಿ ಕೇವಲ 2-3 ವಾರಗಳಿಗೆ ಆಗುವಷ್ಟು ಪ್ಯಾಕೇಜಿಂಗ್ ಕಚ್ಚಾ ವಸ್ತುಗಳ ದಾಸ್ತಾನು ಇದೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪರ್ಯಾಯ ಮಾರ್ಗಗಳ ಮೂಲಕ ಆಮದು ಮಾಡಿಕೊಳ್ಳಲು ವ್ಯವಸ್ಥೆ ಮಾಡದಿದ್ದರೆ, ಔಷಧ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು,” ಎಂದು ಎಚ್ಚರಿಸಿದ್ದಾರೆ.

ಔಷಧಿಗಳ ಬೆಲೆ ನಿಯಂತ್ರಣದಲ್ಲಿದ್ದರೂ, ಪ್ಯಾಕೇಜಿಂಗ್ ವೆಚ್ಚ ಏರಿಕೆಯಾಗಿರುವುದು ಕಂಪನಿಗಳಿಗೆ ದೊಡ್ಡ ಹೊರೆಯಾಗಿದೆ. ಇದು ಅಂತಿಮವಾಗಿ ಗ್ರಾಹಕರ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular