HomeKarnatakaBIG NEWS : ಬೆಂಗಳೂರಿಗರಿಗೆ ಬಿಗ್ ಶಾಕ್ ; ಇಂದಿನಿಂದ ಗೃಹಬಳಕೆ ನೀರಿನ ದರ ಶೇ.3ರಷ್ಟು...

BIG NEWS : ಬೆಂಗಳೂರಿಗರಿಗೆ ಬಿಗ್ ಶಾಕ್ ; ಇಂದಿನಿಂದ ಗೃಹಬಳಕೆ ನೀರಿನ ದರ ಶೇ.3ರಷ್ಟು ಹೆಚ್ಚಳ

ಬೆಂಗಳೂರು: ಇಂದಿನಿಂದ (ಏಪ್ರಿಲ್ 1, 2026) ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದು, ಸಿಲಿಕಾನ್ ಸಿಟಿ ಮಂದಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ನೀರಿನ ದರ ಏರಿಕೆಯಿಂದ ಹಿಡಿದು, ಕಸ ವಿಂಗಡಣೆ ಮಾಡದಿದ್ದರೆ ಬೀಳುವ ಭಾರೀ ದಂಡದವರೆಗೆ ಹಲವು ಹೊಸ ನಿಯಮಗಳು ಇಂದಿನಿಂದಲೇ ಜಾರಿಗೆ ಬಂದಿವೆ. ನಿಮ್ಮ ಜೇಬಿಗೆ ಕತ್ತರಿ ಬೀಳುವ ಮುನ್ನ ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ಗಮನಿಸಿ.

ನೀರಿನ ಬಿಲ್ಏರಿಕೆ : ಬೆಂಗಳೂರು ಜಲಮಂಡಳಿ (BWSSB) ಇಂದಿನಿಂದ ನೀರಿನ ದರವನ್ನು ಶೇ. 3ರಷ್ಟು ಹೆಚ್ಚಿಸಿದೆ. ಪ್ರತಿ ವರ್ಷವೂ ಈ ‘ಆಟೋಮ್ಯಾಟಿಕ್’ ಏರಿಕೆ ಮುಂದುವರಿಯಲಿದೆ.ಬೆಂಗಳೂರು ಜಲಮಂಡಳಿ (BWSSB) ಇಂದಿನಿಂದ ಜಾರಿಗೆ ಬರುವಂತೆ ನೀರಿನ ದರವನ್ನು ಶೇ. 3ರಷ್ಟು ಹೆಚ್ಚಿಸಿದೆ.ಹೆಚ್ಚುತ್ತಿರುವ ವಿದ್ಯುತ್ ವೆಚ್ಚ ಮತ್ತು ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಈ ವಾರ್ಷಿಕ ಸ್ವಯಂಚಾಲಿತ ದರ ಏರಿಕೆ ಜಾರಿಗೆ ತರಲಾಗಿದೆ.ಮನೆಗಳ ನೀರಿನ ಬಿಲ್‌ನಲ್ಲಿ ಪ್ರತಿ ತಿಂಗಳು ಸುಮಾರು ₹20 ರಿಂದ ₹30ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದು ಮೇ ತಿಂಗಳಲ್ಲಿ ಬರುವ ಏಪ್ರಿಲ್‌ನ ಬಿಲ್‌ನಲ್ಲಿ ಪ್ರತಿಫಲಿಸಲಿದೆ.

ಕಸವಿಂಗಡಣೆ ಕಡ್ಡಾಯ: ಇಂದಿನಿಂದ ಹಸಿ ಮತ್ತು ಒಣ ಕಸ ವಿಂಗಡಿಸದಿದ್ದರೆ ₹500 ರಿಂದ₹1,000 ವರೆಗೆ ದಂಡ ಬೀಳಲಿದೆ. ಪುನರಾವರ್ತಿತ ತಪ್ಪಿಗೆ ದಂಡದ ಮೊತ್ತ ದುಪ್ಪಟ್ಟಾಗಲಿದೆ (BSWML ನಿಯಮ).

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆದ್ದಾರಿ ಟೋಲ್ ಬೆಲೆ ಏರಿಕೆ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ಏರ್‌ಪೋರ್ಟ್ ರಸ್ತೆ ಸೇರಿದಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಶೇ. 1 ರಿಂದ5ರಷ್ಟು ಏರಿಕೆಯಾಗಿದೆ.

ವಿದ್ಯುತ್ ದರ ಬಿಸಿ : ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 12-15 ಪೈಸೆ ಏರಿಸುವ ಪ್ರಸ್ತಾವನೆ ಇದ್ದು, ಏಪ್ರಿಲ್ 9ರ ಉಪಚುನಾವಣೆ ಬಳಿಕ ಅಧಿಕೃತ ಘೋಷಣೆ ಸಾಧ್ಯತೆಯಿದೆ.

ಡಿಜಿಟಲ್ ಪಾವತಿ ಸುರಕ್ಷತೆ (RBI): ಇಂದಿನಿಂದ ಯುಪಿಐ (UPI) ಮತ್ತು ಕಾರ್ಡ್ ಪಾವತಿಗಳಿಗೆ ಕೇವಲ OTP ಸಾಕಾಗುವುದಿಲ್ಲ. ಬಯೋಮೆಟ್ರಿಕ್ ಅಥವಾ ಫೇಸ್ ಐಡಿಯಂತಹ ಹೆಚ್ಚುವರಿ ಸುರಕ್ಷತಾ ಹಂತ (2FA) ಕಡ್ಡಾಯವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular