HomeLatest NewsBIG NEWS: ಬಿಎಸ್ಎಫ್ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರ ಕೋಟಾ ಶೇ. 50ಕ್ಕೆ ಹೆಚ್ಚಳ: ದೈಹಿಕ ಪರೀಕ್ಷೆಯಿಂದ...

BIG NEWS: ಬಿಎಸ್ಎಫ್ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರ ಕೋಟಾ ಶೇ. 50ಕ್ಕೆ ಹೆಚ್ಚಳ: ದೈಹಿಕ ಪರೀಕ್ಷೆಯಿಂದ ವಿನಾಯಿತಿ

ನವದೆಹಲಿ: ಬಿಎಸ್ಎಫ್ ಕಾನ್ ಸ್ಟೆಬಲ್ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರ ಕೋಟಾವನ್ನು ಕೇಂದ್ರ ಗೃಹ ಸಚಿವಾಲಯ ಶೇಕಡ 10 ರಿಂದ ಶೇಕಡ 50ಕ್ಕೆ ಹೆಚ್ಚಳ ಮಾಡಿದೆ.

ಗಡಿ ಭದ್ರತಾ ಪಡೆ, ಜನರಲ್ ಡ್ಯೂಟಿ ಕೇಡರ್(ನಾನ್ ಗೆಜೆಟೆಡ್) ನೇಮಕಾತಿ ನಿಯಮ 2015ಕ್ಕೆ ತಿದ್ದುಪಡಿ ತರುವ ಮೂಲಕ ಕೋಟಾ ಹೆಚ್ಚಳ ಮಾಡಲಾಗಿದೆ. ದೈಹಿಕ ಗುಣಮಟ್ಟ ಪರೀಕ್ಷೆ ಮತ್ತು ದೈಹಿಕ ದಕ್ಷತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.

17 ರಿಂದ 21 ವರ್ಷದ ಯುವಕರನ್ನು ಸೇನೆಗೆ ನೇಮಿಸಿಕೊಳ್ಳುವ ಅಗ್ನಿವೀರ್ ನೇಮಕಾತಿ ವ್ಯವಸ್ಥೆಯನ್ನು 2022 ರಲ್ಲಿ ಜಾರಿಗೆ ತರಲಾಗಿತ್ತು. ನಾಲ್ಕು ವರ್ಷದ ಸೇವಾ ಅವಧಿಯ ನಂತರ ಅಗ್ನಿವೀರರು ಬಿಡುಗಡೆ ಹೊಂದುತ್ತಾರೆ. ಇದೀಗ ಅವರಿಗೆ ಬಿಎಸ್ಎಫ್ ನೇಮಕಾತಿಯಲ್ಲಿ ಶೇಕಡ 50ರಷ್ಟು ಕೋಟಾ ಹೆಚ್ಚಳ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಅಗ್ನಿವೀರರ ಮೊದಲ ತಂಡ 5 ವರ್ಷದವರೆಗೂ ವಯೋಮಿತಿ ವಿನಾಯಿತಿ ಪಡೆಯಲಿದೆ. ನಂತರ ಬರುವವರು ಮೂರು ವರ್ಷ ವಿನಾಯಿತಿ ಪಡೆಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular