HomeKarnatakaBIG NEWS: ಸದನದಲ್ಲಿ ಏಕವಚನದಲ್ಲಿ ವಾಗ್ಯುದ್ಧಕ್ಕಿಳಿದ ಹೆಚ್ ಡಿ ಕುಮಾರಸ್ವಾಮಿ - ಸಚಿವ ಚೆಲುವರಾಯಸ್ವಾಮಿ

BIG NEWS: ಸದನದಲ್ಲಿ ಏಕವಚನದಲ್ಲಿ ವಾಗ್ಯುದ್ಧಕ್ಕಿಳಿದ ಹೆಚ್ ಡಿ ಕುಮಾರಸ್ವಾಮಿ – ಸಚಿವ ಚೆಲುವರಾಯಸ್ವಾಮಿ


ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಆತ್ಮಹತ್ಯೆ ಯತ್ನ ವಿಚಾರವಾಗಿ ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಚೆಲುವರಾಯಸ್ವಾಮಿ ವಾಗ್ಯುದ್ಧ ನಡೆಸಿದ ಪ್ರಸಂಗ ನಡೆದಿದೆ. ಸಚಿವರ ಮಾತಿಗೆ ಕೆಂಡಾಮಂಡಲರಾದ ಕುಮಾರಸ್ವಾಮಿ ಏಕವಚನದಲ್ಲೇ ಕಿಡಿಕಾರಿದ ಘಟನೆ ನಡೆದಿದೆ.

ಕುಮಾರಸ್ವಾಮಿಯವರೇ ಇಷ್ಟೊಂದು ಹತಾಶರಾಗಬೇಡಿ. ಪಂಚಾಯ್ತಿ ಲೆವೆಲ್ ನಲ್ಲಿ ರಾಜಕೀಯ ಮಾಡುತ್ತಿದ್ದೀರಾ ನಿಮಗೆ ನಾಚಿಕೆಯಾಗಬೇಕು ಎಂದು ಸಚಿವ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಸಿಟ್ಟಿಗೆದ್ದ ಕುಮಾರಸ್ವಾಮಿ, ಹತಾಶರಾಗಿರುವುದು ಯಾರು ? ನಾಚಿಕೆಯಾಗಬೇಕಿರುವುದು ನನಗಲ್ಲ ನಿಮಗೆ, ಕೂರಯ್ಯ ಸಾಕು, ನಾಚಿಕೆಯಾಗುವಂತಹ ಕೆಲಸ ನಾನು ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular