
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ ಸಿ ರವಿ, ಸರ್ಕಾರವನ್ನು ಬೀಳಿಸಿ ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತಂದವನು ರಮೇಶ್ ಜಾರಕಿಹೊಳಿ. ತನ್ನ ಬಳಿ ದಾಖಲೆಯಿದೆ ಎಂದು ದಿನವೊಂದು ಹೇಳಿಕೆ ಕೊಟ್ಟು ಓಡಾಡುತ್ತಿದ್ದಾನೆ. ಅವನ ಬಳಿ ದಾಖಲೆಗಳಿದ್ದರೆ ತಲೆ ಮೇಲೆ ಹಾಕಿಕೊಳ್ಳಲಿ. ಇಲ್ಲವಾದರೆ ಪ್ರತಿ ದಿನ ಒಂದೊಂದು ದಾಖಲೆ ಬಿಡುಗಡೆ ಮಾಡಲಿ. ಏನು ಬೇಕಾದರೂ ಮಾಡಲಿ ಆತನಿಗೆ ಯಾರೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಬಗ್ಗೆ ಇಡೀ ರಾಜ್ಯದ ಜನತೆಗೊತ್ತು. ಕಚಡಾ ಅವನು, ಜನ ಆತನಿಗೆ ಛೀ, ಥೂ ಎಂದು ಉಗಿಯುತ್ತಿದ್ದಾರೆ. ಅವನ್ದು ಒಂದು ಜನ್ಮಾನಾ… ರಮೇಶ್ ಜಾರಕಿಹೊಳಿ ಒಬ್ಬ ಡಮ್ಮಿ ಪೀಸ್ ಎಂದು ಬೈದಿದ್ದಾರೆ.

