HomeKarnatakaBIG BREAKING: ಡಿ.ಕೆ.ಶಿವಕುಮಾರ್ ವಿರುದ್ಧ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ

BIG BREAKING: ಡಿ.ಕೆ.ಶಿವಕುಮಾರ್ ವಿರುದ್ಧ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಅರೋಪಗಳನ್ನು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ಅವರ 20 ಸಿಡಿಗಳಿವೆ, ಆಡಿಯೋ ಇದೆ ಆದರೆ ಯಾವುದನ್ನೂ ಈಗ ಬಿಡುಗಡೆ ಮಾಡಲ್ಲ, ಸಿಬಿಐಗೆ ಕೊಡುತ್ತೇನೆ ಎಂದು ಹೇಳಿದ ಕೆಲ ಸಮಯದಲ್ಲೇ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಅಕ್ರಮ ಸಂಪತ್ತಿಗೆ ಸಾಕ್ಷ್ಯ ಎನ್ನಲಾಗಿರುವ ಆಡಿಯೋವನ್ನು ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಮಾತನಾಡಿದ್ದಾರೆ ಎನ್ನಲಾದ 19 ಸೆಕೆಂಡ್ ಗಳ ಸಂಭಾಷಣೆಯಿದೆ.

ನನಗೆ ದುಬೈನಲ್ಲಿ ಒಂದು ಮನೆಯಿದೆ, ಲಂಡನ್, ಮುಂಬೈ ನಲ್ಲಿಯೂ ಮನೆಯಿದೆ. ನಮ್ಮ ಮನೆಯ ಮೇಲೆ ದಾಳಿಯಾದಾಗ ಹಣ ಸೀಜ್ ಆಯ್ತು. ನಮ್ಮ ಮನೆಯಲ್ಲಿ 45 ಕೋಟಿ ರೂಪಾಯಿ ಸೀಜ್ ಆಯ್ತು ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಹೊಸ ರಾಜಕೀಯ ಕದನ ಆರಂಭವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular