ಬೀದರ್: ಮಹಾತ್ಮ ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಅವಘಡ ಸಂಭವಿಸಿದೆ. ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಮೂವರು ಗಾಯಗೊಂಡಿದ್ದು, ಓರ್ವನ ಕಾಲು ಕಟ್ ಆಗಿರುವ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಥೇರ್ ಮೈದಾನದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಈ ಘಟನೆ ನಡೆದಿದೆ. ರಥೋತ್ಸವಕ್ಕೆ ಜನಸಾಗರವೇ ಹರಿದು ಬಂದಿದೆ. ದೇವಾಲಯದ ಮುಂಭಾಗದಲ್ಲಿ ರಥೋತ್ಸವ ಹಿನ್ನೆಲೆಯಲ್ಲಿ ಬೃಹತ್ ರಥ ಎಳೆಯುತ್ತಿದ್ದಾಗ ರಥದ ಚಕ್ರಕ್ಕೆ ಸಿಲುಕಿ ಓರ್ವ ಭಕ್ತನ ಕಾಲು ಕಟ್ ಆಗಿದೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರತಿ ವರ್ಷದಂತೆ ಈವರ್ಷವೂ ರಥೋತ್ಸವಕ್ಕೆ ಭಕ್ತಾದಿಗಳು ಸಾಗರೋಪಾದಿಯಲ್ಲಿ ಆಗಮಿಸಿದ್ದು, ಥೇರ್ ಮೈದಾದನಲ್ಲಿ ಭಕ್ತಿ ಭಾವದಿಂದ ಭಕ್ತರು ರಥ ಎಳೆಯುತ್ತಿದ್ದರು. ಈ ವೇಳೆ ಮೂವರು ಭಕ್ತರು ರಥದ ಚಕ್ರಕ್ಕೆ ಸಿಕುಕಿ ಗಾಯಗೊಂಡಿದಾರೆ. ಅವರಲ್ಲಿ ಓರ್ವನ ಕಾಲು ಕಟ್ ಆಗಿದೆ.
ರಥ ಎಳೆಯುವಾಗ ಏಕಾಏಕಿ ಜನರ ನಡುವೆ ನೂಕು ನುಗ್ಗಲು ಉಂಟಾಗಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ರಥ ಮುಂದಕ್ಕೆ ಸಾಗಿದೆ. ಈ ವೇಳೆ ಕೆಲವರು ಕೆಳಗೆ ಬಿದ್ದಿದ್ದು, ಮೂವರು ರಥದ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ
ಧನರಾಜ್, ಭೀಮಾಶಂಕರ್ ಹಾಗೂ ರಿಷಬ್ ಸೇರಿ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಧನರಾಜ್ ಅವರ ಎರಡೂ ಕಾಲುಗಳು ಕಟ್ ಆಗಿವೆ. ರಿಷಬ್ ಎಂಬಾತನ ಕಾಲುಗಳಿಗೆ ಗಂಭೀರಗಾಯಗಳಾಗಿವೆ. ಭೀಮಾಶಂಕರ್ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

