ನವದೆಹಲಿ:ವಿದ್ಯೆ ಇದ್ದವರಿಗೆಲ್ಲಾ ಬುದ್ಧಿ ಇರುತ್ತದೆ ಎನ್ನಲಾಗದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬಿಲಿಯನ್ ಡಾಲರ್ ಕಂಪನಿಯೊಂದರ ನಿರ್ದೇಶಕನಾಗಿರುವ ಐಐಟಿ ಪದವೀಧರನೊಬ್ಬ ತಾನು ಡಿವೋರ್ಸಿ ಆಗಿದ್ದರೂ ಮರು ಮದುವೆಗೆ ಮಾತ್ರ ಕಠಿಣ ಷರತ್ತುಗಳನ್ನು ವಿಧಿಸಿದ್ದಾನೆ. ಆತನ ಈ ಡಬಲ್ ಸ್ಟ್ಯಾಂಡರ್ಡ್ ಬೇಡಿಕೆಗಳನ್ನು ಕೇಳಿ ನೆಟ್ಟಿಗರು ಕೆಂಡಾಮಂಡಲವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಆತನ ಪುರುಷಾಹಂಕಾರದ ವಿರುದ್ಧ ಬಿರುಗಾಳಿ ಎದ್ದಿದೆ
https://www.instagram.com/reel/DXWfRdTCA4Y/?utm_source=ig_web_copy_link&igsh=NTc4MTIwNjQ2YQ==
ಏನಿದು ವಿಚಿತ್ರ ಬೇಡಿಕೆ?
ಮ್ಯಾಚ್ಮೇಕರ್ ಮತ್ತು ಡೇಟಿಂಗ್ ಕೋಚ್ ಓಂಡ್ರಿಲಾ ಕಪೂರ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. 37 ವರ್ಷದ ವ್ಯಕ್ತಿಯೊಬ್ಬ ಮದುವೆಗಾಗಿ ಅವರನ್ನು ಸಂಪರ್ಕಿಸಿದ್ದ. ಆತನ ಬೇಡಿಕೆಗಳು ಹೀಗಿದ್ದವು:
ಅತಾರ್ಕಿಕ ಬೇಡಿಕೆಗಳು ಮತ್ತು ‘ಡಬಲ್ ಸ್ಟ್ಯಾಂಡರ್ಡ್’:
ವಯಸ್ಸು ಮತ್ತು ಜಾತಿ: ವಧುವಿಗೆ 30 ವರ್ಷದೊಳಗಿರಬೇಕು ಮತ್ತು ಆಕೆ ಬ್ರಾಹ್ಮಣ ಸಮುದಾಯಕ್ಕೆ ಸೇರಿರಬೇಕು.
ಕನ್ಯತ್ವದ ಹಠ: ತಾನು ಅದಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರೂ (Divorced), ತನಗೆ ಸಿಗುವ ಹುಡುಗಿಗೆ ಈ ಹಿಂದೆ ಯಾವುದೇ ಪ್ರೇಮ ಸಂಬಂಧ ಅಥವಾ ಲೈಂಗಿಕ ಸಂಬಂಧ ಇರಬಾರದು ಎಂಬುದು ಈತನ ಪಟ್ಟು.
ವಿಚಿತ್ರ ಸಂಶೋಧನೆಯ ವಾದ: “ಹೆಚ್ಚು ಸಂಬಂಧಗಳನ್ನು ಹೊಂದಿರುವ ಮಹಿಳೆಯರು ಭವಿಷ್ಯದಲ್ಲಿ ನಂಬಿಕೆ ದ್ರೋಹ ಎಸಗುವ ಸಾಧ್ಯತೆ ಹೆಚ್ಚು ಎಂದು ನಾನು ಎಲ್ಲೋ ಓದಿದ್ದೇನೆ” ಎಂಬ ಅಸಂಬದ್ಧ ವಾದವನ್ನು ಆತ ಮಂಡಿಸಿದ್ದಾನೆ.
ನಾನು ಗಂಡಸು ಎಂಬ ಅಹಂಕಾರ
ಓಂಡ್ರಿಲಾ ಅವರು ಈತನನ್ನು ಪ್ರಶ್ನಿಸಿದಾಗ, ನೀವು ವಿಚ್ಛೇದಿತರಾಗಿದ್ದರೂ ಹುಡುಗಿಗೆ ಮಾತ್ರ ಇಷ್ಟೊಂದು ಕಂಡೀಷನ್ ಯಾಕೆ? ನಿಮಗೂ ಈ ನಿಯಮ ಅನ್ವಯವಾಗಲ್ವಾ? ಎಂದು ಕೇಳಿದ್ದಾರೆ. ಅದಕ್ಕೆ ಆ ವ್ಯಕ್ತಿ ತುಂಬಾನೇ ಉಡಾಫೆಯಿಂದ ಯಾಕಂದ್ರೆ ನಾನು ಪುರುಷ (I am a man)” ಎಂದು ಉತ್ತರಿಸಿದ್ದಾನಂತೆ ಮದುವೆಗೆ ಮುಂಚೆ ಸಂಬಂಧ ಹೊಂದಿದ್ದರೆ ಭವಿಷ್ಯದಲ್ಲಿ ಪತಿಗೆ ನಿಷ್ಠಳಾಗಿರಲ್ಲ ಎಂಬುದು ಈ ಮಹಾನುಭಾವನ ವಾದ.
ಮ್ಯಾಚ್ಮೇಕರ್ ಕೊಟ್ಟ ತಿರುಗೇಟು:
ಆತನ ಪಿತೃಸತ್ತಾತ್ಮಕ (Patriarchal) ಮನಸ್ಥಿತಿಯಿಂದ ಬೇಸತ್ತ ಓಂಡ್ರಿಲಾ ಕಪೂರ್, ಈ ಕೇಸ್ ಅನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದಾರೆ. ನೀನು ಇಂತಹ ಸಂಪ್ರದಾಯಬದ್ಧ ಹುಡುಗಿಯರನ್ನು ವಂಚಿಸುತ್ತಿದ್ದೀಯ ಎಂದು ನನಗೆ ಅನಿಸುತ್ತಿದೆ ಎಂದು ಹೇಳಿ ಆತನಿಗೆ ಮುಖಭಂಗ ಮಾಡಿದ್ದಾರೆ. 37 ವರ್ಷದ ವಿಚ್ಛೇದಿತ ವ್ಯಕ್ತಿಗೆ ಅಪ್ಪಟ ಸಂಪ್ರದಾಯವಾದಿ ಕುಟುಂಬಗಳು ತಮ್ಮ ಮಗಳನ್ನು ಕೊಡುವುದು ಅಸಾಧ್ಯದ ಮಾತು ಎಂದು ಅವರು ವಿವರಿಸಿದ್ದಾರೆ.

