HomeEntertainment'ಭೀಮ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಭೀಮ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ತನ್ನ ಹಾಡುಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ದುನಿಯಾ ವಿಜಯ್ ಅಭಿನಯದ ‘ಭೀಮ’ ಚಿತ್ರದ ‘ಡು ನಾಟ್ ವರಿ ಬೇಬಿ ಚಿನ್ನಮ್ಮ’ ಎಂಬ ಲಿರಿಕಲ್ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಬಿಡುಗಡೆಯಾಗಿದೆ. ಗಣ ಮುತ್ತು ಈ ಹಾಡಿಗೆ ಧ್ವನಿಯಾಗಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಾಗಾರ್ಜುನ್ ಶರ್ಮಾ ಅವರ ಸಾಹಿತ್ಯವಿದೆ.

ದುನಿಯಾ ವಿಜಯ್ ನೀದೇಶಿಸಿ ನಾಯಕನಾಗಿರುವ ಈ ಚಿತ್ರದಲ್ಲಿ ಅಶ್ವಿನಿ ನಾಯಕಿಯಾಗಿ ಅಭಿನಯಿಸಿದ್ದು, ಕಲ್ಯಾಣಿ ರಾಜು, ಡ್ರ್ಯಾಗನ್ ಮಂಜು, ಪ್ರಿಯಾ ಶತಮರ್ಶನ್, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಉಳಿದ ಪಾತ್ರವರ್ಗದಲ್ಲಿದ್ದಾರೆ. ಕೃಷ್ಣ ಕ್ರಿಯೇಶನ್ಸ್ ಹಾಗೂ ಜಗದೀಶ್ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡಿದ್ದು, ಧನಂಜಯ್ ನೃತ್ಯ ನಿರ್ದೇಶನ, ಮಾಸ್ತಿ ಸಂಭಾಷಣೆ, ಶಿವಸೇನಾ ಛಾಯಾಗ್ರಹಣವಿದೆ. ಚರಣ್ ರಾಜ್  ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular