HomeLatest NewsBIG NEWS: ಇಸ್ಪೀಟ್ ಕ್ಲಬ್ ಗಳ ಮೇಲೆ ದಾಳಿ: 25 ಜನರ ವಿರುದ್ಧ ಪ್ರಕರಣ ದಾಖಲು

BIG NEWS: ಇಸ್ಪೀಟ್ ಕ್ಲಬ್ ಗಳ ಮೇಲೆ ದಾಳಿ: 25 ಜನರ ವಿರುದ್ಧ ಪ್ರಕರಣ ದಾಖಲು

ಕಾರವಾರ: ಇಸ್ಪೀಟ್ ಕ್ಲಬ್ ಗಳ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಇಲ್ಲಿನ ಬೆಳ್ಳೆ ಗ್ರಾಮದ ಕಲ್ಬಂಡಿ ಭೂಮಿಕಾ ಫ್ರೆಂಡ್ಸ್ ರಿಕ್ರಿಯೇಟ್ ಕ್ಲಬ್ ನಲ್ಲಿ ಅಕ್ರಮವಾಗಿ ಇಸ್ಪೀಟ್ ಆಡಿಸುತ್ತಿದ್ದ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಕ್ಲಬ್ ಮಾಲೀಕ ಮಹಾಅದೇವಯ್ಯ ನಾಯಕ್ ಸೇರಿದಂತೆ 25 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದಾರೆ. ಈ ಸಂದರ್ಭದಲ್ಲಿ ಎರಡು ಸಾವಿರ ರೂಪಾಯಿ ನಗದು, ಕಾರ್ಡ್ಸ್, ಟೋಕನ್, ಕ್ಲಬ್ ಮೆಂಬರ್ಸ್ ಲೆಟರ್, ವಿವಿಧ ಕಾರುಗಳು, ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular