ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಪತ್ನಿ ಸಾಕ್ಷಿ ಅವರೊಂದಿಗೆ ಭಾಗವಹಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕೂಡ ಈ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದು, ಧೋನಿ ಅವರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪತ್ನಿ ಸಾಕ್ಷಿ ಜೊತೆ ಧೋನಿ ತಮಾಷೆ!
ಎಂ.ಎಸ್. ಧೋನಿ ಅವರು ಎರಡು ದಿನಗಳ ಹಿಂದೆಯೇ ಪತ್ನಿ ಸಾಕ್ಷಿ ಅವರೊಂದಿಗೆ ಜಾಮ್‌ನಗರಕ್ಕೆ ಆಗಮಿಸಿದ್ದರು. ಭಾನುವಾರ ಸಂಜೆ ರಿಲಯನ್ಸ್ ಟೌನ್‌ಶಿಪ್‌ನಲ್ಲಿ ಆಯೋಜಿಸಲಾಗಿದ್ದ ನವರಾತ್ರಿ ಉತ್ಸವದ ಮೇಳದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಈ ವೇಳೆ ಅನಂತ್ ಅಂಬಾನಿ ಮತ್ತು ಅವರ ಪತ್ನಿ ರಾಧಿಕಾ ಮರ್ಚೆಂಟ್ ಕೂಡ ಧೋನಿ ದಂಪತಿಯೊಂದಿಗೆ ಕಾಣಿಸಿಕೊಂಡರು.
ಬಿಳಿ ಬಣ್ಣದ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ಧೋನಿ, ಅನಂತ್ ಅಂಬಾನಿ ಅವರೊಂದಿಗೆ ವಿವಿಧ ಮನರಂಜನಾ ಆಟಗಳು ಹಾಗೂ ಜೋಕಾಲಿಗಳಲ್ಲಿ ಭಾಗವಹಿಸಿ ಖುಷಿಪಟ್ಟರು.
ಈ ನಡುವೆ ಧೋನಿ ಅವರು ಪತ್ನಿ ಸಾಕ್ಷಿ ಜೊತೆ ಮಾಡಿದ ತುಂಟಾಟದ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಧೋನಿ ಐಸ್‌ಕ್ರೀಂ ತಿನ್ನುತ್ತಿದ್ದಾಗ, ಸಾಕ್ಷಿ ಅವರಿಗೂ ತಿನ್ನಿಸಲು ಚಮಚವನ್ನು ಬಾಯಿಯ ಬಳಿ ತೆಗೆದುಕೊಂಡು ಹೋಗಿದ್ದಾರೆ. ಸಾಕ್ಷಿ ಬಾಯಿ ತೆರೆದ ತಕ್ಷಣ, ಅವರಿಗೆ ತಿನ್ನಿಸುವ ಬದಲು ಧೋನಿಯೇ ಐಸ್‌ಕ್ರೀಂ ತಿಂದುಬಿಟ್ಟಿದ್ದಾರೆ! ಧೋನಿಯ ಈ ತುಂಟಾಟ ಕಂಡ ಸಾಕ್ಷಿ ಕೂಡ ನಗಲಾರಂಭಿಸಿದ್ದಾರೆ. ಈ ಮುದ್ದಾದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಧೋನಿ
ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಎಂ.ಎಸ್. ಧೋನಿ, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಆದರೆ ಮುಂಬರುವ ಐಪಿಎಲ್ ಋತುವಿನಲ್ಲಿ ಅವರು ಆಡಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
*ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಂದ ₹13.3 ಕೋಟಿ ದೇಣಿಗೆಯಲ್ಲಿ ಶೇ.99ರಷ್ಟು ಇಬ್ಬರು ಸಚಿವರಿಂದಲೇ!
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ (TVK) ಪಕ್ಷವು 2025–26ನೇ ಹಣಕಾಸು ವರ್ಷದಲ್ಲಿ ನಾಲ್ವರು ದಾನಿಗಳಿಂದ ಒಟ್ಟು ₹13.3 ಕೋಟಿ ಸ್ವಯಂಪ್ರೇರಿತ ದೇಣಿಗೆ ಸ್ವೀಕರಿಸಿರುವುದಾಗಿ ಘೋಷಿಸಿದೆ. ಈ ಪೈಕಿ ಇಬ್ಬರು ಸಚಿವರಾದ ಆದವ್ ಅರ್ಜುನ ಮತ್ತು ಆರ್.ವಿ. ರಂಜಿತ್‌ಕುಮಾರ್ ಅವರೇ ಶೇ.99ರಷ್ಟು ದೇಣಿಗೆ ನೀಡಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದಾಖಲೆಗಳು ತಿಳಿಸಿವೆ.
ಇಬ್ಬರು ಸಚಿವರಿಂದ ₹13.2 ಕೋಟಿ ದೇಣಿಗೆ
ಕ್ರೀಡೆ ಮತ್ತು ಲೋಕೋಪಯೋಗಿ ಸಚಿವ ಆದವ್ ಅರ್ಜುನ ಅವರು ಟಿವಿಕೆ ಪಕ್ಷಕ್ಕೆ ₹8.2 ಕೋಟಿ ದೇಣಿಗೆ ನೀಡಿದ್ದಾರೆ. ಮತ್ತೊಬ್ಬ ಸಚಿವ ಆರ್.ವಿ. ರಂಜಿತ್‌ಕುಮಾರ್ ಅವರು ₹5 ಕೋಟಿ ಕೊಡುಗೆ ನೀಡಿದ್ದಾರೆ. ಈ ಮೂಲಕ ಪಕ್ಷಕ್ಕೆ ಬಂದ ಒಟ್ಟು ದೇಣಿಗೆಯಲ್ಲಿ ಶೇ.99ಕ್ಕೂ ಹೆಚ್ಚು ಮೊತ್ತ ಈ ಇಬ್ಬರಿಂದಲೇ ಬಂದಿದೆ.
ಆದವ್ ಅರ್ಜುನ ಅವರ ಕೊಡುಗೆಯು ಪಕ್ಷಕ್ಕೆ ವರದಿಯಾದ ಒಟ್ಟು ದೇಣಿಗೆಯ ಶೇ.60ಕ್ಕಿಂತ ಹೆಚ್ಚಿದ್ದು, ಅವರು ಟಿವಿಕೆ ಪಕ್ಷದ ಅತಿದೊಡ್ಡ ದಾನಿಯಾಗಿದ್ದಾರೆ.
ಇನ್ನುಳಿದ ಇಬ್ಬರು ದಾನಿಗಳು ತಲಾ ₹5 ಲಕ್ಷ ದೇಣಿಗೆ ನೀಡಿದ್ದಾರೆ. ತೂತುಕೋಡಿಯ ಲಯನ್ಸ್ ಟೌನ್‌ನಲ್ಲಿರುವ ಸ್ನೋ ಶೋ ಸಂಸ್ಥೆಯು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ₹5 ಲಕ್ಷ ನೀಡಿದೆ. ಅದೇ ವಿಳಾಸದಲ್ಲಿ ನೋಂದಣಿಯಾಗಿರುವ ಸ್ನೋ ಎಕ್ಸ್‌ಪೋರ್ಟ್ಸ್ ಆ್ಯಂಡ್ ಇಂಪೋರ್ಟ್ಸ್ ಸಂಸ್ಥೆಯೂ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಮತ್ತೊಂದು ₹5 ಲಕ್ಷ ಕೊಡುಗೆ ನೀಡಿದೆ.
ಎಐಎಡಿಎಂಕೆ, ಡಿಎಂಕೆಗೂ ಕೋಟ್ಯಂತರ ರೂಪಾಯಿ ದೇಣಿಗೆ
ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, 2025–26ನೇ ಹಣಕಾಸು ವರ್ಷದಲ್ಲಿ ಎಐಎಡಿಎಂಕೆ ಪಕ್ಷವು ಸುಮಾರು ₹161.35 ಕೋಟಿ ಸ್ವಯಂಪ್ರೇರಿತ ದೇಣಿಗೆ ಸ್ವೀಕರಿಸಿದೆ. ಈ ಪೈಕಿ ಟೈಗರ್ ಅಸೋಸಿಯೇಟ್ಸ್ ಸಂಸ್ಥೆಯು ₹135 ಕೋಟಿ ಕೊಡುಗೆ ನೀಡಿದ್ದು, ಪಕ್ಷದ ಅತಿದೊಡ್ಡ ದಾನಿಯಾಗಿದೆ.
ಇದೇ ಅವಧಿಯಲ್ಲಿ ಡಿಎಂಕೆ ಪಕ್ಷವು ಸುಮಾರು ₹191.19 ಕೋಟಿ ದೇಣಿಗೆ ಪಡೆದಿದೆ. ಈ ಪಕ್ಷಕ್ಕೂ ಟೈಗರ್ ಅಸೋಸಿಯೇಟ್ಸ್ ಅತಿದೊಡ್ಡ ದಾನಿಯಾಗಿದ್ದು, ₹125 ಕೋಟಿ ನೀಡಿದೆ.

