HomeKarnatakaಕಮಲ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಶಿಕಾರಿಪುರದಲ್ಲಿ 'ಭಾರತ್ ಜೋಡೋ 2.0' ಪಾದಯಾತ್ರೆಗೆ ಜನಸಾಗರ

ಕಮಲ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಶಿಕಾರಿಪುರದಲ್ಲಿ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಜನಸಾಗರ

ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ್ದ ಭಾರತ್ ಜೊಡೋ ಯಾತ್ರೆಯ ಕರ್ನಾಟಕಕ್ಕೆ ಪ್ರವೇಶಿಸಿದ್ದ ಸವಿನೆನಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು  ರಾಜ್ಯದ 69 ವಿಧಾನ ಸಭಾ ಕ್ಷೇತ್ರಗಳಲ್ಲಿ ಹಮ್ಕಿಕೊಂಡಿರುವ ಭಾರತ್ ಜೋಡೋ 2.0 ಜನತಾ ಪಾದಯಾತ್ರೆಗೆ ಇಂದು ಶಿಕಾರಿಪುರದಲ್ಲಿ ಅದ್ದೂರಿ ಚಾಲನೆ ದೊರೆಯಿತು.

ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿಯಿಂದ ಆರಂಭಗೊಂಡ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಸೇವಾದಳದ ಬಾವುಟವನ್ನು ಹಾರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಸವಂತಪ್ಪ ಇದಕ್ಕೆ ಸಾಥ್ ನೀಡಿದರು.

ಕಿಟ್ಟದಹಳ್ಳಿಯಿಂದ ಶುರುವಾದ ಪಾದಯಾತ್ರೆಯು ಮಟ್ಟಿಕೋಟೆ, ಹೊಸನಗರ ಕ್ರಾಸ್ ಹಾಗೂ ನೆಲವಾಗಿಲು ಕ್ರಾಸ್ ಮೂಲಕ ಸಾಗಿ ಶಿಕಾರಿಪುರ ಪಟ್ಟಣದ ಸಂತೆ ಮೈದಾನ ಸೇರಿತು. ಅಲ್ಲಿ ಬಹಿರಂಗ ಸಭೆ ನಡೆಯಿತು.ಒಟ್ಟು 9 ಕಿಲೋಮೀಟರ್ ದೂರ ಪಾದಯಾತ್ರೆಯು ಸಾಗಿ ಬಂತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಸಾಗಿ ಬಂದ ಪಾದಯಾತ್ರೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು, ಘೋಷಣೆ ಕೂಗುತ್ತಾ ಸಾಗಿ ಬಂದರು. ಪಾದಯಾತ್ರೆ ಸಾಗಿ ಬಂದ ದಾರಿಯ ಉದ್ದಕ್ಕೂ ಕಾಂಗ್ರೆಸ್ ಬಾವುಟ, ಬ್ಯಾನರ್ ಗಳನ್ನು ಹಾಕಲಾಗಿತ್ತು. ಭಾರತ್ ಜೋಡೋ ಕುರಿತು ರಚಿಸಿದ ಹಾಡುಗಳು ಮಾರ್ಧನಿಸಿದವು. ಪಾದಯಾತ್ರೆಯನ್ನು ಅಚ್ಚರಿಯಿಂದ ನೋಡುತ್ತಿದ್ದ ಗ್ರಾಮಸ್ಥರು ಪೊಟೋಗಳನ್ಙು ತೆಗೆಯುತ್ತಾ ಸಂಭ್ರಮಿಸಿದ ದೃಶ್ಯ ಕಂಡು ಬಂತು. ಮಹಿಳೆಯರು, ಮಕ್ಕಳು ಕೂಡ ಅಲ್ಲಲ್ಲಿ ಪಾದಯಾತ್ರೆಗೆ ಜೊತೆಯಾದರು.

ಬಿಜೆಪಿಯ ಬಳ್ಳಾರಿ ಪಾದಯಾತ್ರೆಗೆ ಪ್ರತಿಯಾಗಿಯೇ ಎನ್ನುವಂತೆ ಶಿಕಾರಿಪುರದಿಂದಲೇ ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ 2.0 ಯಾತ್ರೆಯನ್ನು ಆರಂಭಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತು.

 ಪಾದಯಾತ್ರೆಯ ಆರಂಭಕ್ಕೂ ಮುನ್ನ ಈಸೂರಿಗೆ ಭೇಟಿ ನೀಡಿ, ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಸೆಪ್ಟೆಂಬರ್ 30ರಂದು ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಹುತಾತ್ಮರಿಗೆ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್ ಅವರು, 2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಗುಂಡ್ಲುಪೇಟೆ ಮೂಲಕ ಪ್ರವೇಶಿಸಿದ ದಿನದ ಸ್ಮರಣಾರ್ಥವಾಗಿ ರಾಜ್ಯದಲ್ಲಿ ‘ಜನತಾ ಜೋಡೋ ಜಾಗೃತಿ ಯಾತ್ರೆ’ ಆರಂಭಿಸುತ್ತಿರುವುದಾಗಿ ಹರಿಪ್ರಸಾದ್ ತಿಳಿಸಿದರು.

ಈಸೂರು ಗ್ರಾಮವು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಅವರು ಹೇಳಿದರು.

1942ರ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ಸಂದರ್ಭದಲ್ಲಿ ಈಸೂರು ಗ್ರಾಮಸ್ಥರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಐವರು ಸ್ವಾತಂತ್ರ್ಯ ಹೋರಾಟಗಾರರಿಗೆ 1943ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತು ಹಾಗೂ ಸುಮಾರು 68 ಮಂದಿ ಜೈಲು ವಾಸ ಅನುಭವಿಸಿದ್ದರು ಎಂದು ಹರಿಪ್ರಸಾದ್ ಸ್ಮರಿಸಿದರು.

ಇಂತಹ ಪವಿತ್ರ ಸ್ಥಳದಿಂದ ಜನಜಾಗೃತಿ ಯಾತ್ರೆಯನ್ನು ಆರಂಭಿಸಲು ತೀರ್ಮಾನಿಸಿದ್ದೇವೆ. ಹುತಾತ್ಮರಿಗೆ ನಮನ ಸಲ್ಲಿಸಿ ಶಿಕಾರಿಪುರದತ್ತ ಸುಮಾರು 10 ಕಿ.ಮೀ. ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

69 ಕ್ಷೇತ್ರಗಳಲ್ಲಿ ಯಾತ್ರೆ

ಕಾಂಗ್ರೆಸ್ ಸೋತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಯಾತ್ರೆ ನಡೆಸಲಾಗುತ್ತಿದೆ ಎಂದು ಹರಿಪ್ರಸಾದ್ ಹೇಳಿದರು.

ತಮ್ಮ ಪ್ರಕಾರ ರಾಜ್ಯದ 84 ಕಾಂಗ್ರೆಸ್ ಪರಾಜಿತ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಸುಮಾರು 69 ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ನಿರಂತರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ ಹರಿಪ್ರಸಾದ್, ಈ ವಿಚಾರದ ಬಗ್ಗೆ ಜನಜಾಗೃತಿ ಮೂಡಿಸುವುದು ಯಾತ್ರೆಯ ಪ್ರಮುಖ ಉದ್ದೇಶಗಳಲ್ಲಿ ಒಂದು ಎಂದು ಹೇಳಿದರು. ಕಿಟ್ಟದಹಳ್ಳಿಯಿಂದ ಸಾಗಿ ಬಂದ ಪಾದಯಾತ್ರೆಯಲ್ಲಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಬಸವಂತಪ್ಪ, ಶಾಸಕ  ಗೋಪಾಲಕೃಷ್ಣ ಬೇಳೂರು, ನಿಗಮ ಮಂಡಳಿ ಆದ್ಯಕ್ಷರಾದ ಜಿ.ಪಲ್ಲವಿ, ಚೇತನ್ ಕೆ.ಗೌಡ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಬಲ್ಕೀಶ್ ಬಾನು,  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ,  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಸಿ. ಯೋಗೀಶ್, ಮುಖಂಡರಾದ ಎಂ. ಶ್ರೀಕಾಂತ್,  ನಾಗರಾಜ್ ಗೌಡ, ಗೋಣಿ ಮಾಲತೇಶ್, ಇಸ್ಮಾಯಿಲ್ ಖಾನ್, ಶಾಂತವೀರ ನಾಯ್ಕ್, ವಿದ್ಯಾದರ್, ಪುಷ್ಟಾ ಶಿವಕುಮಾರ್,  ಎನ್.ರಮೇಶ್, ಎಸ್ ರವಿಕುಮಾರ್,  ರಮೇಶ್ ಶಂಕರಘಟ್ಟ, ಪಿ.ಎಸ್. ಗಿರೀಶ್ ರಾವ್,  ದಿನೇಶ್ ಪಟೇಲ್, ಪಿ.ಒ.ಶಿವಕುಮಾರ್,ವಿಜಯಕುಮಾರ್(ದನಿ) , ಎಸ್.ಪಿ.ಶೇಷಾದ್ರಿ, ಶರತ್ ಮರಿಯಪ್ಪ, ಮಧುಸೂದನ್ ಸಿಜಿ,   ಕೆ. ರಂಗನಾಥ್, ಹೆಚ್. ಪಾಲಾಕ್ಷಿ, ಹರ್ಷಿತ್ ಗೌಡ, ಧೀರರಾಜ್ ಹೊನ್ನವಿಲೆ, ತಿಮ್ಮರಾಜು ವೈ, ವಿರೇಶ್ ಕ್ಯಾತಿನಕೊಪ್ಪ, ಅನಿಲ್ ಪಟೇಲ್, ಹೆಚ್. ಪಿ. ಗಿರೀಶ್, ಚಿನ್ನಪ್ಪ, ಇತರರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular