ಬೆಂಗಳೂರು: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ-ಸಡಗರ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಕಳೆಕಟ್ಟಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದ್ದಾರೆ..
ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿ, ತೆರೆದ ಜೀಪ್ ನಲ್ಲಿ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್ ಪಡೆ, ಸೇನಾ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಪಥಸಂಚನ ಕಾರ್ಯಕ್ರಮ ಕಣ್ಮನಸೆಳೆಯುತ್ತಿದೆ. ಪಥಸಂಚನದಲ್ಲಿ ಪೊಲೀಸ್, ಸೇನೆ, ಅರೆ ಸೇನಾಪಡೆ, ಸ್ಕೌಟ್, ಗೈಡ್ಸ್, ಎನ್ ಸಿಸಿ, ಸೇವಾದಳ, ಶಾಲಾ ಮಕ್ಕಳು ಭಾಗಿಯಾಗಿದ್ದಾರೆ. ಈ ಬಾರಿ ಕವಾಯಿತಿನಲ್ಲಿ ತಮಿಳಿನಾಡು ಪೊಲೀಸರು ಭಾಗವಹಿಸಿರುವುದು ವಿಶೆಷ.
ಈ ಬಾರಿ ಪಥಸಂಚಲನದಲ್ಲಿ ಒಟ್ಟು 1,100 ಜನರು ಭಾಗಿಯಾಗಿದ್ದಾರೆ. 1,400 ಶಾಲಾ ಮಕ್ಕಳು ಪಥಸಂಚನದಲ್ಲಿ ಹೆಜ್ಜೆ ಹಾಕಿದ್ದಾರೆ. ಪಥಸಂಚನದ ಬಳಿಕ ಪೊಲೀಸ್ ಹಾಗೂ ಸೇನಾ ಸಿಬ್ಬಂದಿಗಳ ಶಕ್ತಿ ಪ್ರದರ್ಶನ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

