HomeKarnatakaBREAKING NEWS: ಬೆಂಗಳೂರಿನಲ್ಲಿ ಝೀಕಾ ವೈರಸ್ ಅಬ್ಬರ: 2 ವಾರದಲ್ಲಿ ಐವರಲ್ಲಿ ಸೋಂಕು ದೃಢ

BREAKING NEWS: ಬೆಂಗಳೂರಿನಲ್ಲಿ ಝೀಕಾ ವೈರಸ್ ಅಬ್ಬರ: 2 ವಾರದಲ್ಲಿ ಐವರಲ್ಲಿ ಸೋಂಕು ದೃಢ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಬೆನ್ನಲ್ಲೇ ಝೀಕಾ ವೈರಸ್ ಅಬ್ಬರ ಆರಂಭವಾಗಿದೆ. ಎರಡು ವಾರಗಳಲ್ಲಿ ಐವರಲ್ಲಿ ಝೀಕಾ ಸೋಂಕು ಪತ್ತೆಯಾಗಿದೆ.

ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ ಐವರಲ್ಲಿ ಝೀಕಾ ವೈರಸ್ ದೃಢ ಪಟ್ಟಿದ್ದು, ಸೋಂಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಅಲ್ಲದೇ ಸೋಂಕಿತರ ಕುಟುಂಬದವರ ರಕ್ತದ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಜಿಗಣಿಯಲ್ಲಿ ಅವರಿಗೆ ಝೀಕಾ ಸೋಂಕು ಪತ್ತೆಯಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆರೋಗ್ಯ ಇಲಾಖೆ ಸೋಂಕಿತರ ಮೇಲೆ ನಿಗಾವಹಿಸಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular