HomeKarnatakaಬೆಂಗಳೂರಲ್ಲಿ ಕೇರಳ ವಿದ್ಯಾರ್ಥಿ ಕಾರಿಗೆ 1,11,500 ರೂ. ದಂಡ!

ಬೆಂಗಳೂರಲ್ಲಿ ಕೇರಳ ವಿದ್ಯಾರ್ಥಿ ಕಾರಿಗೆ 1,11,500 ರೂ. ದಂಡ!

ಬೆಂಗಳೂರು ನಗರ ಸಂಚಾರಿ ಪೊಲೀಸರು ಕೇರಳ ರಾಜ್ಯದ ವಿದ್ಯಾರ್ಥಿ ಕಾರನ್ನು ಸೀಜ್ ಮಾಡಿದ್ದಾರೆ.  ಕಾರಿಗೆ 1,11,500 ರೂ. ದಂಡವನ್ನು ಹಾಕಿದ್ದಾರೆ ಮತ್ತು ಮುಂದಿನ ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾಹಿತಿ ನೀಡಿದ್ದಾರೆ.

ಕಾರಿಗೆ ಆಲ್ಟರ್ ಮಾಡಿದ್ದ ಸೈಲೆನ್ಸರ್ ಅಳವಡಿಸಿದ್ದ ವಿದ್ಯಾರ್ಥಿಯ ಕಾರು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ವಾಹನದ ಮಾರ್ಪಾಡು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವಿರುದ್ಧ ಕಠಿಣ ಎಚ್ಚರಿಕೆ ನೀಡಿ ದಂಡ ಹಾಕಿ, ಕಾರು ಜಪ್ತಿ ಮಾಡಲಾಗಿದೆ.

ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಕರ್ಕಶವಾಗಿ ಶಬ್ದ ಮಾಡುತ್ತಿದ್ದ ಮತ್ತು ಬೆಂಕಿ ಹೊರಸೂಸುವ ಮಾರ್ಪಡಿಸಿದ ಸೈಲೆನ್ಸರ್ ಅಳವಡಿಸಿದ್ದ ಕಾರನ್ನು ಪತ್ತೆ ಹಚ್ಚಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಹೆಣ್ಣೂರು ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಕೇರಳ ಮೂಲದ ವಿದ್ಯಾರ್ಥಿ. ಈ ಕಾರನ್ನು ಹಿಡಿದ ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಘಟನೆಯು ಜನವರಿ ಮೊದಲ ವಾರದಲ್ಲಿ ಹೆಣ್ಣೂರು ರಸ್ತೆಯಲ್ಲಿ ನಡೆದಿದೆ ಎಂಬ ಮಾಹಿತಿ ಇದೆ.

ಸೈಲೆನ್ಸ್‌ರ್‌ನಲ್ಲಿ ಬೆಂಕಿ ಜ್ವಾಲೆ: ಕೇರಳ ಮೂಲದ ವಿದ್ಯಾರ್ಥಿ ಕಾರಿನ ಸೈಲೆನ್ಸರ್‌ನಿಂದ ಅತಿಯಾದ ಶಬ್ದ ಮತ್ತು ಬೆಂಕಿಯ ಜ್ವಾಲೆಗಳನ್ನು ಹೊರಡಿಸುತ್ತಾ ಕಾರು ಓಡಿಸುತ್ತಿದ್ದ. ಜನರು ಮತ್ತು ಸ್ಥಳೀಯ ನಿವಾಸಿಗಳು ಇದನ್ನು ಗಮನಿಸಿ ಈ ಕಾರಿನ ವಿಡಿಯೋ ಮಾಡಿದ್ದರು.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಕಾರನ್ನು ಪತ್ತೆ ಹಚ್ಚಿದ್ದಾರೆ.

ಹೆಣ್ಣೂರು ವಿಭಾಗದ ಸಂಚಾರಿ ಪೊಲೀಸರು ಕಾರನ್ನು ಪತ್ತೆ ಹಚ್ಚಿದ್ದಾರೆ. ಮಾರ್ಪಾಡುಗಳ ತೀವ್ರತೆ ಮತ್ತು ಸಾರ್ವಜನಿಕರಿಗೆ ಉಂಟಾದ ಅಪಾಯವನ್ನು ಪರಿಗಣಿಸಿ, ಪೊಲೀಸರು ಕಾರನ್ನು ಜಪ್ತಿ ಮಾಡಿದರು ಮತ್ತು ಮುಂದಿನ ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾಹಿತಿ ನೀಡಿದ್ದಾರೆ.

ಆರ್‌ಟಿಒ ಅಧಿಕಾರಿಗಳು ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಈ ಮಾರ್ಪಾಡುಗಳು ಮೋಟಾರು ವಾಹನ ಕಾಯ್ದೆಯ ಗಂಭೀರ ಉಲ್ಲಂಘನೆ ಎಂದು ದೃಢಪಟ್ಟಿದೆ.

ಆದ್ದರಿಂದ ಅಧಿಕಾರಿಗಳು ಗರಿಷ್ಠ ದಂಡವಾದ ರೂ. 1,11,500 ಅನ್ನು ವಿಧಿಸಿದರು. ವಿದ್ಯಾರ್ಥಿಯು ಸಂಪೂರ್ಣ ದಂಡವನ್ನು ಪಾವತಿಸಿದ ನಂತರ ವಾಹನವನ್ನು ಬಿಡುಗಡೆ ಮಾಡಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular