HomeLatest Newsಬೆಂಗಳೂರು ಸವಾರರ ಗಮನಕ್ಕೆ: ಪೀಣ್ಯ ಫ್ಲೈಓವರ್ ಬಂದ್ 5 ದಿನಗಳ ಕಾಲ ಸಂಚಾರ ದಟ್ಟಣೆ...

ಬೆಂಗಳೂರು ಸವಾರರ ಗಮನಕ್ಕೆ: ಪೀಣ್ಯ ಫ್ಲೈಓವರ್ ಬಂದ್ 5 ದಿನಗಳ ಕಾಲ ಸಂಚಾರ ದಟ್ಟಣೆ ಭೀತಿ: ಪರ್ಯಾಯ ಮಾರ್ಗ ಬಳಸಿ.

ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚರಿಸುವವರಿಗೆ ಮುಂದಿನ ವಾರ ಭಾರಿ ಟ್ರಾಫಿಕ್ ಬಿಸಿ ತಟ್ಟಲಿದೆ. ಬಹುದಿನಗಳಿಂದ ನಡೆಯುತ್ತಿದ್ದ ಕೇಬಲ್ ದುರಸ್ತಿ ಕಾರ್ಯ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ಲೋಡ್ ಟೆಸ್ಟ್ (ಭಾರ ಪರೀಕ್ಷೆ) ನಡೆಯಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 13 ರಿಂದ ಏಪ್ರಿಲ್ 17 ರವರೆಗೆ ಫ್ಲೈಓವರ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ.

ಫ್ಲೈಓವರ್ ಬಂದ್ ಆಗುವ ಸಮಯ:

ಆರಂಭ: ಏಪ್ರಿಲ್ 13, ಸೋಮವಾರ (ರಾತ್ರಿ 11 ಗಂಟೆಯಿಂದ ಅಥವಾ ಅಧಿಸೂಚನೆಯಂತೆ ಮುಂಜಾನೆಯಿಂದ)

ಅಂತ್ಯ: ಏಪ್ರಿಲ್ 17, ಶುಕ್ರವಾರ (ಬೆಳಗ್ಗೆ 11 ಗಂಟೆಯವರೆಗೆ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮಾರು 32 ಕೋಟಿ ರೂ. ವೆಚ್ಚದಲ್ಲಿ ಪೀಣ್ಯ ಫ್ಲೈಓವರ್‌ನ 1,422 ಹಳೆಯ ಕೇಬಲ್‌ಗಳನ್ನು ಬದಲಾಯಿಸಲಾಗಿದೆ. ಈಗ ಈ ಹೊಸ ಕೇಬಲ್‌ಗಳ ಸಾಮರ್ಥ್ಯ ಪರೀಕ್ಷಿಸಲು 32 ಟನ್ ಭಾರದ 8 ಟ್ರಕ್‌ಗಳನ್ನು ನಿಲ್ಲಿಸಿ ಲೋಡ್ ಟೆಸ್ಟ್ ನಡೆಸಲಾಗುತ್ತದೆ. ಈ ಪರೀಕ್ಷೆ ಯಶಸ್ವಿಯಾದರೆ ಮಾತ್ರ ಭವಿಷ್ಯದಲ್ಲಿ ಲಘು ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಈ ಸೇತುವೆ ಸಂಪೂರ್ಣ ಸುರಕ್ಷಿತ ಎಂದು ಘೋಷಿಸಲಾಗುತ್ತದೆ.

ಪರ್ಯಾಯ ಮಾರ್ಗಗಳು ಹೀಗಿವೆ:

ಸೇತುವೆ ಬಂದ್ ಆಗುವುದರಿಂದ ಕೆಳಗಿನ ರಸ್ತೆಯಲ್ಲಿ ಭಾರಿ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಸಂಚಾರಿ ಪೊಲೀಸರು ಸೂಚಿಸಿರುವ ಬದಲಿ ಮಾರ್ಗಗಳು ಇಲ್ಲಿವೆ:

ನೆಲಮಂಗಲದಿಂದ ಬೆಂಗಳೂರು ಕಡೆಗೆ: ನೆಲಮಂಗಲದಿಂದ ಬರುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಕೆಳಭಾಗದ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಜಂಕ್ಷನ್ ಮತ್ತು ಗೊರಗುಂಟೆಪಾಳ್ಯ ಮಾರ್ಗವಾಗಿ ಚಲಿಸಬೇಕು.

ಬೆಂಗಳೂರಿನಿಂದ ನೆಲಮಂಗಲ ಕಡೆಗೆ: ಸಿಎಂಟಿಐ ಕಡೆಯಿಂದ ಹೋಗುವ ವಾಹನಗಳು ಫ್ಲೈಓವರ್ ಕೆಳಭಾಗದ ರಸ್ತೆಯ ಮೂಲಕ ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ ಠಾಣೆ, ಜಾಲಹಳ್ಳಿ ಕ್ರಾಸ್ ಮತ್ತು ಪಾರ್ಲೆ ಜಿ ಟೋಲ್ ಮೂಲಕ ಸಾಗಬೇಕು.

ಈ 5 ದಿನಗಳ ಕಾಲ ಪೀಣ್ಯ ರಸ್ತೆಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇರುವುದರಿಂದ, ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣಕ್ಕೆ ಹೋಗುವವರು ಹೆಚ್ಚಿನ ಸಮಯವನ್ನು ಕೈಯಲ್ಲಿಟ್ಟುಕೊಂಡು ಹೊರಡುವುದು ಒಳಿತು. ಸಾಧ್ಯವಾದಷ್ಟು ಪರ್ಯಾಯ ರಸ್ತೆಗಳನ್ನು ಬಳಸಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular