HomeKarnatakaಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್ ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ಮಾಡಿದರೆ 35 ವರ್ಷ ಟ್ಯಾಕ್ಸ್ ಫ್ರೀ

ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್ ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ಮಾಡಿದರೆ 35 ವರ್ಷ ಟ್ಯಾಕ್ಸ್ ಫ್ರೀ

ಬೆಂಗಳೂರು: ಸಿಲಿಕಾನ್ ಸಿಟಿಯ ಬಿಗ್ ಪ್ರಾಬ್ಲಮ್ ಆಗಿರುವ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಬಂಪರ್ ಆಫರ್ ಘೋಷಿಸಿದೆ. ಖಾಲಿ ನಿವೇಶನದಲ್ಲಿ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಬರೋಬ್ಬರಿ 35 ವರ್ಷಗಳ ಕಾಲ ಆಸ್ತಿ ತೆರಿಗೆ ವಿನಾಯಿತಿ (Tax Free) ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ, ಬೆಂಗಳೂರಿನ ಆಸ್ತಿ ಮಾಲೀಕರು ಮಾತ್ರ ಸರ್ಕಾರದ ಈ ಪ್ಲಾನ್‌ಗೆ ಕೆಂಡಾಮಂಡಲವಾಗಿದ್ದಾರೆ.

ನಮ್ಮ ಸೈಟು ನಮಗೆ ಮುಖ್ಯವೇ ಹೊರತು, ನಿಮ್ಮ ಟ್ಯಾಕ್ಸ್ ಫ್ರೀ ಆಫರ್ ಅಲ್ಲ ಎಂದು ಜಿಬಿಎ (GBA) ಮತ್ತು ಸಂಚಾರ ಪೊಲೀಸರ ಹೊಸ ಪಾರ್ಕಿಂಗ್ ನೀತಿಯ ವಿರುದ್ಧ ಮಾಲೀಕರು ತಿರುಗಿಬಿದ್ದಿದ್ದಾರೆ. ಇದರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಟ್ರಾಫಿಕ್ ಪೊಲೀಸರು ಜಂಟಿಯಾಗಿ ರೂಪಿಸುತ್ತಿರುವ ‘ಪಾರ್ಕಿಂಗ್ ನೀತಿ-2026’ ಕರಡು ಪ್ರಕಟವಾಗುವ ಮುನ್ನವೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಏನಿದು ಸರ್ಕಾರದ ಹೊಸ ಪಾರ್ಕಿಂಗ್ ನೀತಿ-2026?
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಪಾರ್ಕಿಂಗ್ ದಟ್ಟಣೆಯನ್ನು ನಿಯಂತ್ರಿಸಲು ಸರ್ಕಾರ ಈ ಹೊಸ ಪ್ಲಾನ್ ಮಾಡಿದೆ. ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ (Sites) ಮಲ್ಟಿ-ಸ್ಟೋರಿ ಅಥವಾ ಆಟೋಮೇಟೆಡ್ ಪಾರ್ಕಿಂಗ್ ನಿರ್ಮಿಸಿದರೆ, ಆಯಾ ಆಸ್ತಿ ಮಾಲೀಕರಿಗೆ 15 ರಿಂದ 35 ವರ್ಷಗಳವರೆಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡುವುದಾಗಿ ಸರ್ಕಾರಿ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ತಿ ಮಾಲೀಕರ ಆಕ್ರೋಶಕ್ಕೆ ಕಾರಣವೇನು? ಇದು ಜಾಗ ಕಬಳಿಸುವ ತಂತ್ರನಾ?


ಸರ್ಕಾರದ ಈ ಆಫರ್ ಹಿಂದೆ ದೊಡ್ಡ ಜಾಲ ಅಡಗಿದೆ ಎಂಬುದು ಆಸ್ತಿ ಮಾಲೀಕರ ಗಂಭೀರ ಆರೋಪವಾಗಿದೆ. ಅವರ ಪ್ರಮುಖ ಆತಂಕಗಳು ಹೀಗಿವೆ:

ಸೈಟ್ ಕೈತಪ್ಪುವ ಭೀತಿ: ದಶಕಗಳ ಕಾಲ ಸಾರ್ವಜನಿಕರು ಬಂದು ಪಾರ್ಕಿಂಗ್ ಮಾಡಿದರೆ, ಆ ಜಾಗದ ಮೇಲಿನ ಹಕ್ಕು ಮುಂದೆ ತಮಗೆ ತಪ್ಪಿಹೋಗಬಹುದು ಎಂಬ ಭಯ ಮಾಲೀಕರನ್ನು ಕಾಡುತ್ತಿದೆ.

ಒಂದು ತಲೆಮಾರೇ ಮುಕ್ತಾಯ: “35 ವರ್ಷ ಅಂದರೆ ಒಂದು ತಲೆಮಾರೇ ಕಳೆದುಹೋಗುತ್ತದೆ. ಅಲ್ಲಿಯವರೆಗೆ ನಮ್ಮ ಸ್ವಂತ ಜಾಗವನ್ನು ನಾವು ಬಳಸುವಂತಿಲ್ಲ. ಇದು ಪಾರ್ಕಿಂಗ್ ನೀತಿಯಲ್ಲ, ಖಾಸಗಿ ಜಾಗಗಳನ್ನು ಪರೋಕ್ಷವಾಗಿ ವಶಪಡಿಸಿಕೊಳ್ಳುವ ತಂತ್ರ” ಎಂದು ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರದ ವೈಫಲ್ಯ: ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಯೋಗ್ಯತೆ ಇಲ್ಲದೆ, ಸರ್ಕಾರ ಈಗ ಸಾರ್ವಜನಿಕರ ಖಾಲಿ ಸೈಟುಗಳ ಮೇಲೆ ಕಣ್ಣು ಹಾಕಿದೆ ಎಂದು ಜನರು ದೂರಿದ್ದಾರೆ.

ಮತ್ತೊಂದು ವರ್ಗದ ಜನಾಭಿಪ್ರಾಯ: “ನಮಗೇ ಲಾಭ, ಕಾಯಂ ಆದಾಯದ ಮೂಲ

ಆದರೆ, ಸರ್ಕಾರದ ಈ ನೀತಿಯನ್ನು ಕೆಲವು ಆಸ್ತಿ ಮಾಲೀಕರು ಸ್ವಾಗತಿಸಿದ್ದಾರೆ. ಅವರ ಪ್ರಕಾರ:

ಇಷ್ಟು ದಿನ ಖಾಲಿ ಬಿದ್ದಿದ್ದ ಸೈಟ್‌ಗಳಿಂದ ಮಾಲೀಕರಿಗೆ ಯಾವುದೇ ಆದಾಯವಿರಲಿಲ್ಲ, ಮೇಲಾಗಿ ಪ್ರತಿ ವರ್ಷ ಕಿಸೆಯಿಂದ ದೊಡ್ಡ ಮೊತ್ತದ ಟ್ಯಾಕ್ಸ್ ಕಟ್ಟಬೇಕಿತ್ತು. ಅಲ್ಲಿ ಯಾರು ಬೇಕಾದರೂ ಬಂದು ಗಾಡಿ ನಿಲ್ಲಿಸಿ ಹೋಗುತ್ತಿದ್ದರೂ ನಯಾಪೈಸೆ ಸಿಗುತ್ತಿರಲಿಲ್ಲ.ಈಗ ಸರ್ಕಾರವೇ ಅಧಿಕೃತವಾಗಿ ಪಾರ್ಕಿಂಗ್ ಮಾಡಲು ಅವಕಾಶ ಕೊಟ್ಟು, ದಶಕಗಳ ಕಾಲ ತೆರಿಗೆ ವಿನಾಯಿತಿ ನೀಡುತ್ತಿರುವುದು ಲಾಭದಾಯಕ.

ಮಾಲೀಕರೇ ಸ್ವತಃ ಹೂಡಿಕೆ ಮಾಡಿ ಅಥವಾ ಪಿಪಿಪಿ (PPP) ಮಾಡೆಲ್‌ನಲ್ಲಿ ಪಾರ್ಕಿಂಗ್ ಬಿಲ್ಡಿಂಗ್ ಕಟ್ಟಿದರೆ, ಪಾರ್ಕಿಂಗ್ ಶುಲ್ಕದ ಮೂಲಕ ಮುಂದಿನ ತಲೆಮಾರಿಗೆ ಒಂದು ಕಾಯಂ ಆದಾಯದ ಮೂಲ (Permanent Income Source) ಸಿಕ್ಕಂತಾಗುತ್ತದೆ ಎಂದು ಈ ವರ್ಗದ ಜನರು ಅಭಿಪ್ರಾಯಪಟ್ಟಿದ್ದಾರೆ.ಒಟ್ಟಿನಲ್ಲಿ, ಕರಡು ಪ್ರಕಟವಾಗುವ ಮುನ್ನವೇ ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿ ಪರ-ವಿರೋಧದ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular