HomeKarnatakaಬೆಂಗಳೂರು ಮೆಟ್ರೋಗೆ 6 ಹೊಸ ಫೀಡರ್ ಬಸ್‌ಗಳು ಸೇರ್ಪಡೆ ಯಾವ ಮಾರ್ಗ? ಎಷ್ಟು ಸಮಯಕ್ಕೆ? ಸಂಪೂರ್ಣ...

ಬೆಂಗಳೂರು ಮೆಟ್ರೋಗೆ 6 ಹೊಸ ಫೀಡರ್ ಬಸ್‌ಗಳು ಸೇರ್ಪಡೆ ಯಾವ ಮಾರ್ಗ? ಎಷ್ಟು ಸಮಯಕ್ಕೆ? ಸಂಪೂರ್ಣ ಮಾಹಿತಿ

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ನಡುವೆ ದಿನನಿತ್ಯ ಸಂಚರಿಸುವ ನಮ್ಮ ನಮ್ಮ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಮತ್ತು ಬಿಎಂಟಿಸಿ (BMTC) ಜಂಟಿಯಾಗಿ ಮಹತ್ವದ ಸಿಹಿಸುದ್ದಿ ನೀಡಿವೆ. ಮೆಟ್ರೋ ನಿಲ್ದಾಣಗಳಿಂದ ಐಟಿ ಕಾರಿಡಾರ್ ಹಾಗೂ ಪ್ರಮುಖ ವಸತಿ ಪ್ರದೇಶಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಲು ಇಂದಿನಿಂದ ಹೊಸದಾಗಿ 6 ಮೆಟ್ರೋ ಫೀಡರ್ ಬಸ್‌ಗಳ ಸೇವೆಗೆ ಚಾಲನೆ ನೀಡಲಾಗಿದೆ.

ವಿಶೇಷವಾಗಿ ಐಟಿ ಕಂಪನಿಗಳ ಉದ್ಯೋಗಿಗಳು ಹೆಚ್ಚಾಗಿ ಪ್ರಯಾಣಿಸುವ ಮಾರ್ಗಗಳನ್ನೇ ಗುರಿಯಾಗಿಸಿಕೊಂಡು ಈ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ. ಈ ಹೊಸ ಫೀಡರ್ ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿ, ಹೊಸ ರಸ್ತೆ, ಕೆ.ಆರ್. ಪುರ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣಗಳನ್ನು ಸುತ್ತಮುತ್ತಲಿನ ವಾಣಿಜ್ಯ ಮತ್ತು ಉದ್ಯೋಗ ಕೇಂದ್ರಗಳೊಂದಿಗೆ ಜೋಡಿಸಲಿವೆ.

ಫೀಡರ್ ಬಸ್‌ಗಳು ಸಂಚರಿಸುವ ಸಂಪೂರ್ಣ ಮಾರ್ಗ (Route):
ಈ ಫೀಡರ್ ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ ಹೊರಟು ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ವರೆಗೆ ಈ ಕೆಳಗಿನ ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸಲಿವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ ನಿಂದ ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ)ಕ್ಕೆ ಫೀಡರ್‌ ಬಸ್‌ಗಳು ಸಂಚಾರ ಮಾಡಲಿವೆ. ಬಸ್‌ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ – ಎಲೆಕ್ಟ್ರಾನಿಕ್ ಸಿಟಿ – ಕೋನಪ್ಪನ ಅಗ್ರಹಾರ – ಹೊಸ ರಸ್ತೆ – ಹರಳೂರು – ಸರ್ಜಾಪುರ ರಸ್ತೆ ಜಂಕ್ಷನ್ – ಕಾಡುಬೀಸನಹಳ್ಳಿ – ಮಾರತಹಳ್ಳಿ ಸೇತುವೆ ಜಂಕ್ಷನ್ – ದೊಡ್ಡನೆಕ್ಕುಂಡಿ ರೈಲ್ವೆ ಸೇತುವೆ – ಮಹದೇವಪುರ ಜಂಕ್ಷನ್ – ಕೆ.ಆರ್. ಪುರಂ ರೈಲ್ವೆ ನಿಲ್ದಾಣ – ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ). ಮಾರ್ಗದಲ್ಲಿ ಸಂಚಾರ ಮಾಡಲಿದೆ.

ಬಸ್‌ಗಳ ವೇಳಾಪಟ್ಟಿ (Timings):

ಪ್ರಯಾಣಿಕರು ತಮ್ಮ ಕಚೇರಿ ಹಾಗೂ ಮನೆಗೆ ತಲುಪಲು ಅನುಕೂಲವಾಗುವಂತೆ ದಿನದ ವಿವಿಧ ಸಮಯಗಳಲ್ಲಿ ಬಸ್ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ:

ವೇಳಾಪಟ್ಟಿ
ಎಲೆಕ್ಟ್ರಾನಿಕ್‌ ಸಿಟಿ ವಿಪ್ರೋಗೇಟ್‌ನಿಂದ ಹೊರಡುವ ಸಮಯ: ಬೆಳಗ್ಗೆ: 05:30, 06:00, 06:30, 07:00, 07:40, 08:20, 09:00, 10:20 ಮಧ್ಯಾಹ್ನ: 1:15, 2:00, 2:40, 3:10, 3:50 ಸಂಜೆ/ರಾತ್ರಿ: 4:30, 5:10, 5:50, 6:30, 7:10, 7:50, 8:30 ಹಾಗೂ 9:10 ಗಂಟೆಗೆ

ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ಯಿಂದ ಹೊರಡುವ ಸಮಯ ಬೆಳಗ್ಗೆ 5:30, 6:00, 6:30, 7:00, 7:40, 8:20, 9:00, 9:40, 10:20, 11:00, 11:40, 12:10 ಮಧ್ಯಾಹ್ನ/ಸಂಜೆ/ರಾತ್ರಿ: 3:50, 4:30, 5:10, 5:50, 6:30, 7:10, 7:50, 8:30 ಹಾಗೂ 9:10 ಗಂಟೆಗೆ.

ಐಟಿ ಉದ್ಯೋಗಿಗಳು ಹಾಗೂ ಮಹಿಳೆಯರಿಗೆ ಸುರಕ್ಷಿತ ಪ್ರಯಾಣ

ಮೆಟ್ರೋ ನಿಲ್ದಾಣದಿಂದ ಕಚೇರಿಗಳಿಗೆ ಅಥವಾ ಮನೆಗೆ ಕೊನೆಯ ಹಂತದ ಸಂಪರ್ಕ (Last-mile connectivity) ಇಲ್ಲದೆ ಪರದಾಡುತ್ತಿದ್ದ ಸಾರ್ವಜನಿಕರಿಗೆ, ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿ ಭಾಗದ ಐಟಿ ಉದ್ಯೋಗಿಗಳಿಗೆ ಈ ಬಸ್‌ಗಳು ವರದಾನವಾಗಲಿವೆ. ಈ ಸೇವೆಯನ್ನು ನೇರವಾಗಿ ಸರ್ಕಾರಿ ಸ್ವಾಮ್ಯದ ಬಿಎಂಟಿಸಿಯೇ ಒದಗಿಸುತ್ತಿರುವುದರಿಂದ, ಮಹಿಳೆಯರು ಮತ್ತು ಮಕ್ಕಳು ತಡರಾತ್ರಿಯ ವೇಳೆಯಲ್ಲೂ ಯಾವುದೇ ಭಯವಿಲ್ಲದೆ ಅತ್ಯಂತ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular