HomeKarnatakaಇರಾನ್ ಯುದ್ಧದ ಎಫೆಕ್ಟ್, ಬೆಂಗಳೂರಿನಲ್ಲಿ ರೊಟ್ಟಿಬಂದ್ ಗ್ಯಾಸ್ ಸಿಲಿಂಡರ್ ಕೊರತೆಗೆ ಕಂಗಾಲಾದ ಐಟಿ ಉದ್ಯೋಗಿಗಳು ವೈರಲ್...

ಇರಾನ್ ಯುದ್ಧದ ಎಫೆಕ್ಟ್, ಬೆಂಗಳೂರಿನಲ್ಲಿ ರೊಟ್ಟಿಬಂದ್ ಗ್ಯಾಸ್ ಸಿಲಿಂಡರ್ ಕೊರತೆಗೆ ಕಂಗಾಲಾದ ಐಟಿ ಉದ್ಯೋಗಿಗಳು ವೈರಲ್ ಆಯ್ತು ಪಿಜಿ ನೋಟಿಸ್

ಪಶ್ಚಿಮ ಏಷ್ಯಾದಲ್ಲಿ ಎದ್ದಿರುವ ಯುದ್ಧದ ಕಿಡಿ ಈಗ ಬೆಂಗಳೂರಿನ ಐಟಿ ಕಾರಿಡಾರ್‌ನ ಅಡುಗೆ ಮನೆಗಳನ್ನು ತಲುಪಿದೆ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಸಿಲಿಕಾನ್ ಸಿಟಿಯ ಪಿಜಿಗಳಲ್ಲಿ (PG) ಈಗ ಆಹಾರದ ಹಾಹಾಕಾರ ಶುರುವಾಗಿದೆ. ಅದರಲ್ಲೂ ಉತ್ತರ ಭಾರತೀಯ ಉದ್ಯೋಗಿಗಳ ಮೆಚ್ಚಿನ ರೊಟ್ಟಿಗೆ ಈಗ ಬ್ರೇಕ್ ಬಿದ್ದಿದೆ

ಇನ್ಮುಂದೆ ರೊಟ್ಟಿ ಇಲ್ಲ ವೈರಲ್ ಆಯ್ತು ನೋಟಿಸ್

ಬೆಂಗಳೂರಿನ ಪೂರ್ವ ಭಾಗದ (Whitefield, ITPL ಪರಿಸರ) ಪಿಜಿಯೊಂದರಲ್ಲಿ ಹಾಕಲಾಗಿರುವ ನೋಟಿಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದೆ. ಹಾಗಾಗಿ ಮುಂದಿನ ಸೂಚನೆ ಬರುವವರೆಗೆ ಪಿಜಿಯಲ್ಲಿ ರೊಟ್ಟಿ ಮಾಡಲಾಗುವುದಿಲ್ಲ ಎಂಬ ಬೋರ್ಡ್ ನೋಡಿ ಐಟಿ ಮಂದಿ ಕಂಗಾಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://www.instagram.com/reel/DVtVnr6DxXq/?utm_source=ig_web_copy_link&igsh=NTc4MTIwNjQ2YQ==

ಐಟಿ ಉದ್ಯೋಗಿಗಳ ಆತಂಕ:

ಸಾರಿಕಾ ಪುರೋಹಿತ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಲಕ್ಷಾಂತರ ವ್ಯೂವ್ಸ್ ಪಡೆದಿದೆ.

ಇದು ಕೆಟ್ಟ ಕನಸೇ? ಎಂದು ಪ್ರಶ್ನಿಸಿರುವ ಅವರು, ರೊಟ್ಟಿ ಇಲ್ಲದೆ ಉತ್ತರ ಭಾರತೀಯರು ಜೀವನ ಮಾಡುವುದು ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕಮೆಂಟ್ ಬಾಕ್ಸ್‌ನಲ್ಲಿ ನೂರಾರು ಯುವಕರು “ನಮ್ಮ ಪಿಜಿಯಲ್ಲೂ ಇದೇ ಪರಿಸ್ಥಿತಿ ಇದೆ” ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ.

ಸಂಕಷ್ಟಕ್ಕೆ ಅಸಲಿ ಕಾರಣವೇನು?

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಬಿಗುವಿನ ವಾತಾವರಣದಿಂದ ಇಂಧನ ಆಮದಿನಲ್ಲಿ ವ್ಯತ್ಯಯ ಉಂಟಾಗಿದೆ.

ಸಿಲಿಂಡರ್ ಕೊರತೆ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಬೆಂಗಳೂರಿನಲ್ಲಿ ಶೂನ್ಯಕ್ಕೇರಿದೆ.

ನಿರ್ಬಂಧ: ಗ್ಯಾಸ್ ಉಳಿಸಲು ಪಿಜಿಗಳಲ್ಲಿ ಹೆಚ್ಚಿನ ಅನಿಲ ಬೇಡುವ ‘ರೊಟ್ಟಿ’ ಅಥವಾ ‘ಚಪಾತಿ’ ತಯಾರಿಕೆಯನ್ನು ನಿಲ್ಲಿಸಲಾಗಿದೆ. ಜೊತೆಗೆ ನಿವಾಸಿಗಳಿಗೆ ಸ್ವಂತ ಅಡುಗೆ ಮಾಡಿಕೊಳ್ಳಲು ನೀಡಿದ್ದ ಅವಕಾಶವನ್ನೂ ಕಡಿತಗೊಳಿಸಲಾಗಿದೆ.

ಬೆಂಗಳೂರಿನ ಹೋಟೆಲ್‌ಗಳು ಈಗಾಗಲೇ ಸೌದೆ ಒಲೆಗೆ ಶರಣಾಗಿವೆ ಆದರೆ ಸೌದೆ ಒಲೆ ವ್ಯವಸ್ಥೆ ಇಲ್ಲದ ಪಿಜಿಗಳ ಸ್ಥಿತಿ ಈಗ ಶೋಚನೀಯವಾಗಿದೆ. ಸರ್ಕಾರವು “ದಾಸ್ತಾನು ಇದೆ” ಎನ್ನುತ್ತಿದ್ದರೂ, ಮಾರುಕಟ್ಟೆಯಲ್ಲಿ ಸಿಲಿಂಡರ್ ಸಿಗದಿರುವುದು ದೊಡ್ಡ ವಿರೋಧಾಭಾಸಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular