HomeKarnatakaBREAKING NEWS: ಗಡಿಯಲ್ಲಿ ಮತ್ತೆ ಕಿರಿಕ್ ಮಾಡಲು ನಾಡದ್ರೋಹಿ MES ಸಿದ್ಧತೆ: 'ಕನ್ನಡ ರಾಜ್ಯೋತ್ಸವ'ಕ್ಕೆ ಪ್ರತಿಯಾಗಿ...

BREAKING NEWS: ಗಡಿಯಲ್ಲಿ ಮತ್ತೆ ಕಿರಿಕ್ ಮಾಡಲು ನಾಡದ್ರೋಹಿ MES ಸಿದ್ಧತೆ: ‘ಕನ್ನಡ ರಾಜ್ಯೋತ್ಸವ’ಕ್ಕೆ ಪ್ರತಿಯಾಗಿ ‘ಕರಾಳ ದಿನ ಆಚರಣೆ’ಗೆ ನಿರ್ಧಾರ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ದಿನ ಸಮೀಪಿಸುತ್ತಿದ್ದಂತೆ ಬೆಳಗಾವಿ ಹಾಗೂ ಮಹಾರಾಷ್ಟ್ರಗಡಿಯಲ್ಲಿ ಮತ್ತೆ ಕಿರಿಕ್ ಮಾಡಲು ನಾಡದ್ರೋಹಿ ಎಂಇಎಸ್ ಸಿದ್ಧತೆ ನಡೆಸಿದೆ. ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆಗೆ ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ಎಂಇಎಸ್ ಬೆಳಗಾವಿಯ ಮರಾಠಾ ಮಂಡಲ ಕಾರ್ಯಾಲಯದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ದಿನದಂದು ಕರಾಳ ದಿನ ಆಚರಣೆ ಮೆರವಣಿಗೆ ನಿರ್ಧರಿಸಿದೆ.

ನ.1ರಂದು ಬೆಳಗಾವಿಯಲ್ಲಿ ಈಬಾರಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ತಯಾರಿ ನಡೆಸಿದ್ದು, ಕರಾಳ ದಿನ ಆಚರಣೆಗೆ ಯಾವುದೇ ಅವಕಾಶವಿಲ್ಲ. ಎಂಇಎಸ್ ಇಂತಹ ಯತ್ನ ನಡೆಸಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿಸಿ ಮೊಹಮ್ಮದ್ ರೋಷನ್ ಎಚ್ಚರಿಕೆ ನೀಡಿದ್ದರು. ಡಿಸಿ ಹೇಳಿಕೆ ಬೆನ್ನಲ್ಲೇ ಎಂಇಎಸ್ ಸಭೆ ನಡೆಸಿ ಕ್ಯಾತೆ ತೆಗೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular