HomeKarnatakaಹೆತ್ತ ತಾಯಿಯ ಸಾವಿನ ಸುದ್ದಿ ತಿಳಿದರೂ ಅಂತ್ಯಕ್ರಿಯೆಗೂ ಬಾರದ ಮಕ್ಕಳು: ಬೆಳಗಾವಿಯಲ್ಲಿ ಮನಕಲಕುವ ಘಟನೆ

ಹೆತ್ತ ತಾಯಿಯ ಸಾವಿನ ಸುದ್ದಿ ತಿಳಿದರೂ ಅಂತ್ಯಕ್ರಿಯೆಗೂ ಬಾರದ ಮಕ್ಕಳು: ಬೆಳಗಾವಿಯಲ್ಲಿ ಮನಕಲಕುವ ಘಟನೆ

ಬೆಳಗಾವಿ: ಹೆತ್ತು ಹೊತ್ತು ಸಾಕಿ ಸಲುಹಿದ್ದ ತಾಯಿ ವೃದ್ಧಾಶ್ರಮದಲ್ಲಿ ಸಾವನ್ನಪ್ಪಿದರೂ ಮಕ್ಕಳು ಅಂತ್ಯಕ್ರಿಯೆಗೂ ಬಾರದ ಮನಕಲಕುವ ಘಟನೆ ಬೆಳಗಾವಿಯಲಿ ಬೆಳಕಿಗೆ ಬಂದಿದೆ.

ಇಬ್ಬರು ಮಕ್ಕಳಿದ್ದರೂ ತಾಯಿ ಅಂತ್ಯಕ್ರಿಯೆ ನೆರವೇರಿಸಲು ಬಾರದ ಕಾರಣಕ್ಕೆ ಸಮಾಜಸೇವಕರೇ ನಿಂತು ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂಜನಾ ಧಾಮೊನೆ ಮೃತ ವೃದ್ಧೆ.
ಮಕ್ಕಳ ಕಟುಕ ಮನಸ್ಸಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.

ಮೂಲತಃ ಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದ ಅಂಜನಾ ಧಾಮೊನೆ ಎಂಬ ವೃದ್ಧೆ ಶಾಹುನಗರದ ವೃದ್ಧಾಶ್ರಮದಲ್ಲಿ ವಾಸವಿದ್ದರು. ವಯೋಸಹ ಕಾಯಿಲೆಯಿಂದ ಬಳಲುತ್ತಿದ್ದ ಅಂಜಾನಾ ಅವರನ್ನು ಇಬ್ಬರು ಮಕ್ಕಳು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿದ್ದರು. ಅನಾರೋಗ್ಯದಿಂದಾಗಿ ಅಂಜಾನ ನಿಧನರಾಗಿದ್ದರು. ವೃದ್ಧಾಶ್ರಮದ ಸಿಬ್ಬಂದಿ ಇಬ್ಬರು ಮಕ್ಕಳಿಗೂ ಕರೆ ಮಾಡಿ ನಿಮ್ಮ ತಾಯಿ ಕೊನೆಯುಸಿರೆಳೆದಿದ್ದಾರೆ ಎಂದು ವಿಷಯ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆತ್ತ ತಾಯಿ ಸಾವನ್ನಪ್ಪಿದರೂ ಅಂತಿಮ ದರ್ಶನಕ್ಕೆ, ಅಂತ್ಯಕ್ರಿಯೆಗೂ ಬರಲು ಒಪ್ಪದ ಮಕ್ಕಳು, ನೀವೇ ಅಂತ್ಯಕ್ರಿಯೆ ಮಾಡಿ ಮುಗಿಸುವಂತೆ ಹೇಳಿ ಫೋನ್ ಕಟ್ ಮಾಡಿದ್ದಾರಂತೆ.  ಇದರಿಂದ ವೃದ್ಧಾಶ್ರಮದ ಸಿಬ್ಬಂದಿಗೆ ಬೇರೆ ದಾರಿ ತೋಚದಾಗಿದೆ. ಈ ವೇಳೆ ವೃದ್ಧಾಶ್ರಮದವರು, ನಗರಸೇವಕ ಶಂಕರ ಪಾಟೀಲ ಮತ್ತು ಸಮಾಜಸೇವಕ ಗಂಗಾಧರ ಪಾಟೀಲ ಅವರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಇಬ್ಬರು, ಮೃತ ವೃದ್ಧೆಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸಿದ್ದಾರೆ. ನಿಖಿಲ್ ಅಪ್ಪುಗೋಳ, ಸ್ಮಶಾನ ಭೂಮಿ ಸಿಬ್ಬಂದಿ ನಿಸ್ಸಾರ ಅವರು ಸಹಾಯ ಪಡೆದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ತಾಯಿ ಅನಾರೀಗ್ಯಕ್ಕೀಡಾಗಿ ಬಳಲುತ್ತಿದ್ದರೂ ಕೊನೆಗಾಲದಲ್ಲಿಯೂ ತಾಅಯಿಯನ್ನು ನೋಡಿಕೊಳ್ಳದ ಮಕ್ಕಳು ಕನಿಷ್ಟಪಕ್ಷ ತಾಯಿ ಸಾವನ್ನಪ್ಪಿದಾಗ ಅಂತ್ಯಕ್ರಿಯೆಗೂ ಬಾರದೇ ಮನುಷತ್ವವನ್ನೇ ಮರೆತು ವರ್ತಿಸಿದ್ದಾರೆ. ಸಂಬಂಧ, ಪರುಇಚಯವೂ ಇಲ್ಲದ ಸಮಾಜ ಸೇವಕರು ಮೃತ ವೃದ್ಧೆಯ ಅಂತ್ಯಕ್ರಿಕೆ ನೆರವೇರಿಸಿ ಅಂತಃಕರಣ ಮೆರೆದು ಮಾನವೀಯತೆ ತೋರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular