HomeKarnatakaBIG NEWS: ನೈವೇದ್ಯ ಅರ್ಪಿಸಲು ಹೋಗಿ ಕೃಷ್ಣಾ ನದಿ ಪಾಲಾದ ಯುವಕ

BIG NEWS: ನೈವೇದ್ಯ ಅರ್ಪಿಸಲು ಹೋಗಿ ಕೃಷ್ಣಾ ನದಿ ಪಾಲಾದ ಯುವಕ

ಬೆಳಗಾವಿ: ರಾಜ್ಯದಲ್ಲಿ ಮಳೆಯ ಅಬ್ಬರ ಅನಾಹುತಗಳನ್ನು ಸೃಷ್ಟಿಸುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತುಂಬಿ ಹರಿಯುವ ನದಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ದುರಂತಕ್ಕೀಡಾಗುವುದು ನಿಶ್ಚಿತ. ಇಲ್ಲೋರ್ವ ಯುವಕ ನದಿಗೆ ನೈವೇದ್ಯ ಬಿಡಲು ಹೋಗಿ ನೀರುಪಾಲಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಈ ದುರಂತ ನಡೆದಿದೆ. 31 ವರ್ಷದ ರೋಹನ್ ಪಾಟೀಲ್ ಎಂಬಾತ ಪೂಜೆ ಬಳಿಕ ನದಿಗೆ ನೈವೇದ್ಯ ಅರ್ಪಿಸಲೆಂದು ಕೃಷ್ಣಾ ನದಿಗೆ ಇಳಿದಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ.

ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular