HomeEntertainmentಸೋಷಿಯಲ್ ಮೀಡಿಯಾದಲ್ಲಿ 'ಬಟ್ವಾರಾ 1947' ಧಮಾಕಾ: ಸನ್ನಿ ಡಿಯೋಲ್ ನಟನೆಗೆ ಪ್ರೇಕ್ಷಕರು ಫಿದಾ!

ಸೋಷಿಯಲ್ ಮೀಡಿಯಾದಲ್ಲಿ ‘ಬಟ್ವಾರಾ 1947’ ಧಮಾಕಾ: ಸನ್ನಿ ಡಿಯೋಲ್ ನಟನೆಗೆ ಪ್ರೇಕ್ಷಕರು ಫಿದಾ!

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಹಾಗೂ ಸನ್ನಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಬಟ್ವಾರಾ 1947’ ಸಿನಿಮಾ ಬೆಳ್ಳಿಪರದೆಗೆ ಅಪ್ಪಳಿಸಿದೆ. ಸನ್ನಿ ಡಿಯೋಲ್ ಜೊತೆಗೆ ಪ್ರೀತಿ ಜಿಂಟಾ, ಶಬಾನಾ ಅಜ್ಮಿ, ಅಲಿ ಫಜಲ್ ಹಾಗೂ ಕರಣ್ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ, ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

ಚಿತ್ರದ ಟ್ರೇಲರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿತ್ತಾದರೂ, ಆರಂಭಿಕ ಮುಂಗಡ ಟಿಕೆಟ್ ಬುಕಿಂಗ್ ಸಾಧಾರಣ ಮಟ್ಟದಲ್ಲಿತ್ತು. ಆದರೆ ಮೊದಲ ದಿನವೇ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾ ಎಕ್ಸ್ ತಾಣದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದೇಶ ವಿಭಜನೆಯ ಸಮಯದ ಭಾವುಕ ಕಥಾಹಂದರವನ್ನು ಹೊಂದಿರುವ ಈ ಸಿನಿಮಾ ವೀಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

ವಿಶೇಷವಾಗಿ ಸನ್ನಿ ಡಿಯೋಲ್ ಅವರ ಗಂಭೀರ ನಟನೆ, ಧ್ವನಿ ಹಾಗೂ ಭಾವುಕ ದೃಶ್ಯಗಳಲ್ಲಿನ ಅಭಿನಯಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಗಾದರ್’ ಚಿತ್ರದ ನಂತರ ಸನ್ನಿ ಡಿಯೋಲ್ ಅವರ ಮತ್ತೊಂದು ಅತ್ಯುತ್ತಮ ನಟನೆ ಇದಾಗಿದೆ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. ರಾಜಕುಮಾರ್ ಸಂತೋಷಿ ಮತ್ತು ಸನ್ನಿ ಡಿಯೋಲ್ ಕಾಂಬಿನೇಷನ್ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯ ಪ್ರೇಕ್ಷಕರು ಹಾಗೂ ನೆಟ್ಟಿಗರಿಂದ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ, ಚಿತ್ರ ವಿಮರ್ಶಕರಿಂದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಚಿತ್ರಮಂದಿರಗಳಲ್ಲಿ ‘ಅವಾರಪನ್ 2’ ಸಿನಿಮಾದೊಂದಿಗೆ ಪೈಪೋಟಿ ಏರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ‘ಬಟ್ವಾರಾ 1947’ ಸಿನಿಮಾ ಪ್ರೇಕ್ಷಕರ ಬೆಂಬಲದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವ ನಿರೀಕ್ಷೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular