HomeKarnatakaನನಗೆ ಕಿರುಕುಳ, ಹಿಂಸೆ ನೀಡಿ ರಾಜೀನಾಮೆ ಪಡೆದಿದ್ದಾರೆ: ಬೇಸರ ವ್ಯಕ್ತಪಡಿಸಿದ ಬಸವರಾಜ್ ಹೊರಟ್ಟಿ

ನನಗೆ ಕಿರುಕುಳ, ಹಿಂಸೆ ನೀಡಿ ರಾಜೀನಾಮೆ ಪಡೆದಿದ್ದಾರೆ: ಬೇಸರ ವ್ಯಕ್ತಪಡಿಸಿದ ಬಸವರಾಜ್ ಹೊರಟ್ಟಿ

ಗದಗ: ನನಗೆ ಕಿರುಕುಳ ನೀಡಿ ರಾಜೀನಾಮೆಯನ್ನು ಪಡೆದಿದ್ದಾರೆ. ನಾನು ನೋವಿನಿಂದಲೇ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಮಾತನಾಡಿದ ಬಸವರಾಜ್ ಹೊರಟ್ಟಿ, ನನ್ನ ರಾಜೀನಾಮೆ ಪಡೆಯಲು ಸ್ವತಃ ಸಿಎಂ ಬಂದು ಕುಳಿತಿದ್ದರು. ಸ್ಪೀಕರ್ ಕಚೇರಿಗೆ ಬಂದು ಬಾಗಿಲು ಹಾಕಿಕೊಂಡು ಒಂದೂವರೆ ಗಂಟೆ ಕುಳಿತಿದ್ದರು. ಕಿರುಕುಳ ರೂಪದಲ್ಲಿ ನನ್ನ ರಾಜೀನಾಮೆ ಪಡೆದುಕೊಂಡಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಜುಲೈ 24ರಂದು ರಾತ್ರಿ 11 ಗಂಟೆಗೆ ಸಿಎಂ ಡಿ.ಕೆ. ಶಿವಕುಮಾರ್ ಕರೆ ಮಾಡಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಆದರೆ ಆಗಸ್ಟ್ 14ರಂದು ವಿಧಾನ ಪರಿಷತ್ ಅಧಿವೇಶನ ಕರೆದು, ಸದನದ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ತಮ್ಮ ಆಪ್ತ ಕಾರ್ಯದರ್ಶಿಯಿಂದ ರಾಜೀನಾಮೆ ಪತ್ರ ತರಿಸಿ, ಯಾವುದೇ ಕಾರಣ ನೀಡದೇ ಸಿಎಂ ಅವರೇ ಲೆಟರ್ ಟೈಪ್ ಮಾಡಿಸಿ ತಮ್ಮಿಂದ ಸಹಿ ಮಾಡಿಸಿಕೊಂಡರು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಪೀಕರ್ ಕಚೇರಿಗೆ ಬಂದು ಸಿಎಂ ಅವರು ಒಂದೂವರೆ ಗಂಟೆ ಕುಳಿತು ದೌರ್ಜನ್ಯದ ರೀತಿಯಲ್ಲಿ ರಾಜೀನಾಮೆ ಪಡೆದಿದ್ದು ನನಗೆ ಬಹಳ ನೋವುಂಟು ಮಾಡಿದೆ. ನೋವಿನಿಂದಲೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular