HomeKarnatakaಬ್ಯಾಂಕ್ ಗೆ ಬಂದು ಪಾಸ್ ಬುಕ್ ಎಂಟ್ರಿ ಮಾಡಿಸಿದ ಗ್ರಾಹಕನಿಗೆ ಶಾಕ್: ಖಾತೆಯಲ್ಲಿದ್ದ 2.31 ಲಕ್ಷ...

ಬ್ಯಾಂಕ್ ಗೆ ಬಂದು ಪಾಸ್ ಬುಕ್ ಎಂಟ್ರಿ ಮಾಡಿಸಿದ ಗ್ರಾಹಕನಿಗೆ ಶಾಕ್: ಖಾತೆಯಲ್ಲಿದ್ದ 2.31 ಲಕ್ಷ ರೂ. ಮಾಯ

ಹಾಸನ: ವ್ಯಕ್ತಿಯೊಬ್ಬರ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ 2.31 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಶಾಂತಿಗ್ರಾಮ ಹೋಬಳಿಯ ತಮ್ಲಾಪುರದ ಅಣ್ಣೇಗೌಡ ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ನವೆಂಬರ್ 30 ರಿಂದ ಡಿಸೆಂಬರ್ 24ರ ನಡುವೆ ಅಣ್ಣೇಗೌಡ ಅವರ ಬ್ಯಾಂಕ್ ಖಾತೆಯಿಂದ ಅನೇಕ ಬಾರಿ 2,31,525 ರೂ. ಹಣ ಡ್ರಾ ಮಾಡಲಾಗಿದೆ. ಆದರೆ, ಇದು ಅವರ ಗಮನಕ್ಕೆ ಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಸೆಂಬರ್ 24 ರಂದು 5,000 ರೂ. ಹಣ ಡ್ರಾ ಆಗಿರುವ ಬಗ್ಗೆ ಮೆಸೇಜ್ ಬಂದಿದೆ. ಕೂಡಲೇ ಅವರು ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಅವರ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸಿರುವುದು ಗೊತ್ತಾಗಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular