HomeLatest NewsBREAKING: ಬೆಂಗಳೂರು ಏರ್ ಪೋರ್ಟ್ ನಲ್ಲಿ ಕೋಟ್ಯಂತರ ರೂಪಾಯಿ ಚಿನ್ನ, ವಜ್ರಾಭರಣ ಕಳ್ಳತನ: ಸಿಬ್ಬಂದಿಯಿಂದಲೇ ಕೃತ್ಯ...

BREAKING: ಬೆಂಗಳೂರು ಏರ್ ಪೋರ್ಟ್ ನಲ್ಲಿ ಕೋಟ್ಯಂತರ ರೂಪಾಯಿ ಚಿನ್ನ, ವಜ್ರಾಭರಣ ಕಳ್ಳತನ: ಸಿಬ್ಬಂದಿಯಿಂದಲೇ ಕೃತ್ಯ ಶಂಕೆ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ರೂಪಾಯಿ ಚಿನ್ನಾಭರಣ, ವಜ್ರಾಭರಣಗಳು ಕಳ್ಳತನವಾಗಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ವಜ್ರ ಕಳ್ಳತನವಾಗಿದೆ.

ಮಹಿಳೆ ಚೆಕ್ ಇನ್ ನಲ್ಲಿ ಚಿನ್ನ ತೋರಿಸಿ ಬ್ಯಾಗ್ ಗೆ ಟ್ಯಾಗ್ ಮಾಡಿದ್ದರು. ಲಗೇಜ್ ಬ್ಯಾಗ್ ನಲ್ಲಿಟ್ಟಿದ್ದ ಚಿನ್ನ ದುಬೈಗೆ ಹೋಗುವಷ್ಟರಲ್ಲಿ ಮಾಯವಾಗಿದೆ. ಏರ್ ಪೋರ್ಟ್ ಸಿಬ್ಬಂದಿಯೇ ಚಿನ್ನಾಭರಣ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

790 ಗ್ರಾಂ ಚಿನ್ನ, 8 ಲಕ್ಷ ಬೆಲೆ ಬಾಳುವ ವಜ್ರಾಭರಣಗಳು ಇದ್ದವು. ಎಲ್ಲವೂ ಕಳ್ಳತನವಾಗಿದೆ. ಬೆಂಗಳೂರು ಏರ್ ಪೋರ್ಟ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular