ಅಮೆರಿಕ ಸರ್ಕಾರವು H-1B ವೀಸಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಟೆಕ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಈ ನಿರ್ಧಾರದಿಂದ ವಿದೇಶಿ ಉದ್ಯೋಗಿಗಳ ನೇಮಕಾತಿ ಕಂಪನಿಗಳಿಗೆ ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ, ವೀಸಾ ಕಿರಿಕಿರಿ ಮತ್ತು ಸರ್ಕಾರದ ಅನುಮತಿಗಾಗಿ ಕಾಯುವ ಬದಲು ಭಾರತದಲ್ಲೇ ತನ್ನ ಸಾಮ್ರಾಜ್ಯ ವಿಸ್ತರಿಸಲು ಗೂಗಲ್ (Google) ಮುಂದಾಗಿದೆ.
ಹೌದು. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಬೆಂಗಳೂರಿನ ವೈಟ್ಫೀಲ್ಡ್ ಟೆಕ್ ಕಾರಿಡಾರ್ನಲ್ಲಿ ಗೂಗಲ್ ಬರೋಬ್ಬರಿ 20,000 ಉದ್ಯೋಗಿಗಳಿಗಾಗಿ ಬೃಹತ್ ಕ್ಯಾಂಪಸ್ ಸಿದ್ಧಪಡಿಸುತ್ತಿದೆ.
ಒಟ್ಟು 24 ಲಕ್ಷ ಚದರ ಅಡಿ ಬೃಹತ್ ಕ್ಯಾಂಪಸ್ ಸಿದ್ದವಾಗುತ್ತಿದ್ದು,ಈಗಾಗಲೇ ಒಂದು ಆಫೀಸ್ ಟವರ್ ಅನ್ನು ಗುತ್ತಿಗೆಗೆ (Lease) ಪಡೆದಿರುವ ಗೂಗಲ್, ಇನ್ನುಳಿದ ಎರಡು ಟವರ್ಗಳಿಗಾಗಿ ಮಾತುಕತೆ ನಡೆಸುತ್ತಿದೆ.ಪ್ರಸ್ತುತ ಭಾರತದಲ್ಲಿ 14,000 ಉದ್ಯೋಗಿಗಳಿದ್ದು, ಈ ಹೊಸ ಕ್ಯಾಂಪಸ್ ಪೂರ್ಣಗೊಂಡರೆ ಅಮೆರಿಕದ ಹೊರಗಿನ ಗೂಗಲ್ನ ಅತಿದೊಡ್ಡ ಕೇಂದ್ರವಾಗಿ ಭಾರತ ಹೊರಹೊಮ್ಮಲಿದೆ.
ವೀಸಾ ಫೀಸ್’ಗೆ ಬ್ರೇಕ್
ಅಮೆರಿಕ ಸರ್ಕಾರವು H-1B ವೀಸಾ ಅರ್ಜಿಗೆ ಬರೋಬ್ಬರಿ 1 ಲಕ್ಷ ಡಾಲರ್ (ಸುಮಾರು ₹84 ಲಕ್ಷ) ಫೀಸ್ ನಿಗದಿಪಡಿಸಿದೆ. ಇದರಿಂದಾಗಿ ಭಾರತೀಯ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಬದಲು, ಭಾರತದಲ್ಲೇ ಕೆಲಸ ನೀಡುವುದು ಲಾಭದಾಯಕ ಎಂದು ಕಂಪನಿಗಳು ಭಾವಿಸಿವೆ. ಇದರಿಂದ ವೀಸಾ ವಿಳಂಬ ಮತ್ತು ಅನಗತ್ಯ ವೆಚ್ಚಗಳಿಗೆ ಗೂಗಲ್ ‘ಚೆಕ್’ ಇಟ್ಟಂತಾಗಿದೆ.
AI ಲೋಕದ ಕೇಂದ್ರಬಿಂದು ಭಾರತ
ಪ್ರಸ್ತುತ ಜಗತ್ತು ಕೃತಕ ಬುದ್ಧಿಮತ್ತೆ (AI) ಕಡೆಗೆ ಮುಖ ಮಾಡಿದೆ. ಉನ್ನತ ಮಟ್ಟದ ಇಂಜಿನಿಯರಿಂಗ್ ಕೆಲಸಗಳಿಗೆ ಭಾರತವು ಈಗ ಜಾಗತಿಕ ಕೇಂದ್ರವಾಗುತ್ತಿದೆ. ಈಗಾಗಲೇ ‘ಆಂಥ್ರೋಪಿಕ್’ ನಂತಹ ಎಐ ಕಂಪನಿಗಳು ಭಾರತದಲ್ಲಿ ನೆಲೆಯೂರಿವೆ. ಈಗ ಗೂಗಲ್ನ ಈ ಬೃಹತ್ ಹೂಡಿಕೆಯು ಭಾರತದ ಟೆಕ್ ಮಾರುಕಟ್ಟೆಗೆ ಮತ್ತಷ್ಟು ಆನೆಬಲ ತಂದಿದೆ.
ಗೂಗಲ್ ತನ್ನ ಈ ಬೃಹತ್ ವಿಸ್ತರಣೆಯನ್ನು ಮುಖ್ಯವಾಗಿ AI (Artificial Intelligence) ಮತ್ತು Cloud Computing ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುತ್ತಿದೆ. ಹಾಗಾಗಿ, ಈ ಕೆಳಗಿನ ಕ್ಷೇತ್ರಗಳಲ್ಲಿ ಹೆಚ್ಚಿನ ನೇಮಕಾತಿ ನಡೆಯುವ ಸಾಧ್ಯತೆಯಿದೆ:
- AI ಮತ್ತು ಮೆಷಿನ್ ಲರ್ನಿಂಗ್ (AI & ML)
ಗೂಗಲ್ ತನ್ನ “Gemini” ಮತ್ತು ಇತರ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ಇಂಜಿನಿಯರ್ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
• ಹುದ್ದೆಗಳು: AI ಸಂಶೋಧಕರು, ಡೇಟಾ ಸೈಂಟಿಸ್ಟ್ಸ್ ಮತ್ತು ಮೆಷಿನ್ ಲರ್ನಿಂಗ್ ಇಂಜಿನಿಯರ್ಸ್. - ಸಾಫ್ಟ್ವೇರ್ ಇಂಜಿನಿಯರಿಂಗ್ (Core Engineering)
ಗೂಗಲ್ನ ಸರ್ಚ್ ಇಂಜಿನ್, ಆಂಡ್ರಾಯ್ಡ್ ಓಎಸ್ ಮತ್ತು ಯೂಟ್ಯೂಬ್ಗೆ ಸಂಬಂಧಿಸಿದ ಬ್ಯಾಕೆಂಡ್ ಕೆಲಸಗಳು ಇಲ್ಲಿಂದಲೇ ನಡೆಯಲಿವೆ.
• ಹುದ್ದೆಗಳು: ಫುಲ್ ಸ್ಟ್ಯಾಕ್ ಡೆವಲಪರ್ಸ್, ಸಿಸ್ಟಮ್ ಆರ್ಕಿಟೆಕ್ಟ್ಸ್ ಮತ್ತು ಮೊಬೈಲ್ ಆಪ್ ಡೆವಲಪರ್ಸ್. - ಗೂಗಲ್ ಕ್ಲೌಡ್ (Google Cloud)
ಜಾಗತಿಕವಾಗಿ ಕ್ಲೌಡ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವುದರಿಂದ, ಈ ಹೊಸ ಕ್ಯಾಂಪಸ್ ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಮತ್ತು ಸೈಬರ್ ಸೆಕ್ಯೂರಿಟಿಗೆ ಹೆಚ್ಚಿನ ಆದ್ಯತೆ ನೀಡಲಿದೆ.
• ಹುದ್ದೆಗಳು: ಕ್ಲೌಡ್ ಸಲ್ಯೂಷನ್ ಆರ್ಕಿಟೆಕ್ಟ್ಸ್, ಸೈಬರ್ ಸೆಕ್ಯೂರಿಟಿ ಅನಲಿಸ್ಟ್ಸ್. - ಚಿಪ್ ಡಿಸೈನಿಂಗ್ ಮತ್ತು ಹಾರ್ಡ್ವೇರ್
ಗೂಗಲ್ ತನ್ನದೇ ಆದ ‘Tensor’ ಚಿಪ್ಗಳನ್ನು ಸ್ಮಾರ್ಟ್ಫೋನ್ ಮತ್ತು ಸರ್ವರ್ಗಳಿಗಾಗಿ ತಯಾರಿಸುತ್ತಿದೆ. ಬೆಂಗಳೂರು ಈ ವಿನ್ಯಾಸದ ಪ್ರಮುಖ ಕೇಂದ್ರವಾಗಲಿದೆ.
• ಹುದ್ದೆಗಳು: ಹಾರ್ಡ್ವೇರ್ ಡಿಸೈನ್ ಇಂಜಿನಿಯರ್ಸ್, VLSI ವಿನ್ಯಾಸಕರು. - ಮ್ಯಾನೇಜ್ಮೆಂಟ್ ಮತ್ತು ಸಪೋರ್ಟ್
ಸಾವಿರಾರು ಉದ್ಯೋಗಿಗಳಿರುವಾಗ ಅವರನ್ನು ನಿರ್ವಹಿಸಲು ದೊಡ್ಡ ತಂಡದ ಅವಶ್ಯಕತೆ ಇರುತ್ತದೆ.
• ಹುದ್ದೆಗಳು: ಪ್ರಾಜೆಕ್ಟ್ ಮ್ಯಾನೇಜರ್ಸ್, ಎಚ್ಆರ್ (HR) ಪ್ರೊಫೆಷನಲ್ಸ್ ಮತ್ತು ಕಸ್ಟಮರ್ ಸಪೋರ್ಟ್ ಸ್ಪೆಷಲಿಸ್ಟ್ಸ್.

