ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಹಂತ ಹಂತವಾಗಿ ಸರ್ಕಾಅರ ಜನರಿಂದ ಲೂಟಿಗೆ ಇಳಿದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಬೆಂಗಳೂರಿನಲ್ಲಿ ಈಗ ಹೊಸ ಪಾರ್ಕಿಂಗ್ ನೀತಿ ಆರಂಭಿಸಿದಾರೆ. ನಮ್ಮ ನಮ್ಮ ಸ್ವಂತ ಮನೆಗಳ ಮುಂದೆ ನಮ್ಮ ಸ್ವಂತ ಕಾರುಗಳನ್ನು ನಿಲ್ಲಿಸುವಂತಿಲ್ಲ. ನಿಲ್ಲಿಸದರೆ ಅದಕ್ಕೂ ಭಾರಿ ದಂಡ ತೆರಬೇಕಾದ ಹೊಸ ರೂಲ್ಸ್. ಈ ಮೂಲಕ ಸಿಎಂ ಡಿ.ಕೆ.ಶಿವಕುಮಾರ್ ಜನರಿಂದ ನೇರವಾಗಿ ವಸುಲಿಗೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಪಾಪರ್ ಆಗಿದೆ, ಅಂದರೆ ಆರ್ಥಿಕವಾಗಿ ದಿವಾಳಿಯಾಗಿದೆ.ಸರ್ಕಾರವು ತನ್ನನ್ನು ತಾನೇ ಪಾಪರ್ ಸರ್ಕಾರ ಎಂದು ಘೋಷಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಏಳು ಕಾರ್ಪೊರೇಷನ್‌ಗಳಲ್ಲಿ ಐದು ಕಾರ್ಪೊರೇಷನ್‌ಗಳು ಈಗಾಗಲೇ ಪಾಪರ್ ಆಗಿ, ಬೋರ್ಡ್ ಹಾಕಿಕೊಂಡಿವೆ. ಸರ್ಕಾರದಲ್ಲಿ ಹಣವಿಲ್ಲದ ಕಾರಣ, ತೆರಿಗೆಗಳ ಮೇಲೆ ತೆರಿಗೆಗಳನ್ನು ಹೇರುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಕಸದ ಮೇಲೆ, ಎಲೆಕ್ಟ್ರಿಕ್ ಚಾರ್ಜ್ ಮೇಲೆ, ಹಾಲಿನ ಮೇಲೆ ಮತ್ತು ಮನೆಗಳ ಮೇಲೆ ತೆರಿಗೆಗಳನ್ನು ಹಾಕಲಾಗಿತ್ತು. ಈಗ ಮನೆ ಮುಂದೆ ನಿಲ್ಲಿಸುವ ಕಾರುಗಳ ಮೇಲೂ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ ಎಂದರೆ ಈ ಸರ್ಕಾರ ಜನರನ್ನು ಲೂಟಿ ಮಾಡಲು ಹೊರಟಿದೆ ಎಂದು ವಾಅಗ್ದಾಳಿ ನಡೆಸಿದರು.

