HomeLatest Newsಶ್ರೀ ರಾಮನವಮಿ ಪ್ರಯುಕ್ತ ನಾಳೆ ಬೆಂಗಳೂರಲ್ಲಿ ಪ್ರಾಣಿವಧೆ , ಮಾಂಸ ಮಾರಾಟ ನಿಷೇಧ !

ಶ್ರೀ ರಾಮನವಮಿ ಪ್ರಯುಕ್ತ ನಾಳೆ ಬೆಂಗಳೂರಲ್ಲಿ ಪ್ರಾಣಿವಧೆ , ಮಾಂಸ ಮಾರಾಟ ನಿಷೇಧ !

ಬೆಂಗಳೂರು :   ಬೆಂಗಳೂರಿನಲ್ಲಿ ಮಾರ್ಚ್ 27, 2026 ರಂದು ಶ್ರೀರಾಮನವಮಿ ಹಬ್ಬವಿರುವುದರಿಂದ ಮಹತ್ವದ ಆದೇಶವೊಂದನ್ನು ಹೊರಡಿಸಲಾಗಿದೆ.ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಅಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ನಗರದ ಎಲ್ಲಾ ಕಸಾಯಿಖಾನೆಗಳು, ಚಿಲ್ಲರೆ ಮಾಂಸದ ಅಂಗಡಿಗಳು ಮತ್ತು ಮಾರುಕಟ್ಟೆ ಮಳಿಗೆಗಳಿಗೆ ಈ ನಿಯಮ ಅನ್ವಯವಾಗುತ್ತದೆ.ಶ್ರೀರಾಮನವಮಿ ಹಬ್ಬದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಬ್ಬದ ದಿನದಂದು ಯಾವುದೇ ಗೊಂದಲಕ್ಕೀಡಾಗದೆ ಸರ್ಕಾರದ ಈ ಆದೇಶವನ್ನು ಪಾಲಿಸಲು ನಾಗರಿಕರಲ್ಲಿ ವಿನಂತಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆದೇಶ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ದಿನಾಂಕ: 27-03-2026 ರ ಶುಕ್ರವಾರ “ಶ್ರೀರಾಮನವಮಿ” ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರದೇಶ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular