HomeLatest NewsBREAKING : ನೇಪಾಳದ ನೂತನ ಪ್ರಧಾನಿಯಾಗಿ 'ಬಲೇನ್ ಶಾ' ಪ್ರಮಾಣವಚನ ಸ್ವೀಕಾರ : ವೇದಘೋಷಗಳ ನಡುವೆ...

BREAKING : ನೇಪಾಳದ ನೂತನ ಪ್ರಧಾನಿಯಾಗಿ ‘ಬಲೇನ್ ಶಾ’ ಪ್ರಮಾಣವಚನ ಸ್ವೀಕಾರ : ವೇದಘೋಷಗಳ ನಡುವೆ ಐತಿಹಾಸಿಕ ಪಟ್ಟಾಭಿಷೇಕ !

ಕಾಠ್ಮಂಡು:  ನೇಪಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದೆ. ರಾಷ್ಟ್ರೀಯ ಸ್ವತಂತ್ರ ಪಕ್ಷದ ನಾಯಕ ಬಲೇನ್ ಶಾ ಅವರು ಆಧ್ಯಾತ್ಮಿಕ ವಿಧಿವಿಧಾನಗಳ ನಡುವೆ ನೇಪಾಳದ ಪ್ರಧಾನಮಂತ್ರಿಯಾಗಿ ಪಟ್ಟಕ್ಕೇರಿದ್ದಾರೆ. ಕೇವಲ ರಾಜಕೀಯ ಸಮಾರಂಭಕ್ಕೆ ಸೀಮಿತವಾಗದೆ, 108 ಯುವಕರ ಆಶೀರ್ವಾದ ಮತ್ತು ಶಂಖನಾದಗಳ ಮೊಳಗಿನೊಂದಿಗೆ ನಡೆದ ಈ ಪ್ರಮಾಣವಚನ ಸ್ವೀಕಾರವು ಇಡೀ ವಿಶ್ವದ ಗಮನ ಸೆಳೆದಿದೆ.

ಹೌದು.    ರಾಷ್ಟ್ರೀಯ ಸ್ವತಂತ್ರ ಪಕ್ಷದ ಹಿರಿಯ ನಾಯಕ ಬಲೇನ್ ಶಾ (ಬಲೇಂದ್ರ) ಅವರು ಇಂದು (ಶುಕ್ರವಾರ, ಮಾರ್ಚ್ 27, 2026) ನೇಪಾಳದ ನೂತನ ಪ್ರಧಾನಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು. ಅಧ್ಯಕ್ಷರ ನಿವಾಸವಾದ ‘ಶೀತಲ್ ನಿವಾಸ್’ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಬಲೇನ್ ಶಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ಸಂಪ್ರದಾಯ ಮುರಿದ ನೂತನ ಶೈಲಿಯ ಸಮಾರಂಭ

ಈ ಬಾರಿ ಪ್ರಮಾಣವಚನ ಸಮಾರಂಭವು ರಾಜಕೀಯ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉತ್ಸವದಂತೆ ಕಂಡುಬಂದಿತು. ನೇಪಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ವೇದ ಆಚರಣೆಗಳನ್ನು ಒಳಗೊಂಡ ವಿಶಿಷ್ಟ ಸಮಾರಂಭ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಂಖನಾದದ ವೈಭವ: ಏಕಕಾಲದಲ್ಲಿ ಏಳು ಶಂಖಗಳನ್ನು ಊದುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಯೋಗ ವಿಜ್ಞಾನದ ಪ್ರಕಾರ, ಶಂಖದ ಕಂಪನಗಳು ದೇಹದ ಏಳು ಚಕ್ರಗಳನ್ನು (ಮೂಲಾಧಾರದಿಂದ ಸಹಸ್ರಾರವರೆಗೆ) ಜಾಗೃತಗೊಳಿಸುತ್ತವೆ ಎಂಬ ನಂಬಿಕೆಯಿದೆ.

ವೇದ ಮಂತ್ರಘೋಷ: 108 ಯುವಕರು ಆಶೀರ್ವಚನ ನೀಡಿದರೆ, 16 ಬೌದ್ಧ ಭಿಕ್ಕುಗಳು ‘ಅಷ್ಟಮಂಗಳ’ ಶಾಸ್ತ್ರವನ್ನು ಪಠಿಸಿದರು. ಇದು ರಾಷ್ಟ್ರದ ಆಧ್ಯಾತ್ಮಿಕ ಸಮತೋಲನ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಸಪ್ತರ್ಷಿಗಳ ಆಶೀರ್ವಾದ: ಹಿಂದೂ ಧರ್ಮಗ್ರಂಥಗಳ ಪ್ರಕಾರ ‘ಏಳು’ ಎಂಬ ಸಂಖ್ಯೆಯು ಸಂಪೂರ್ಣತೆ, ಜಯ ಮತ್ತು ಸುಖದ ಸಂಕೇತವಾಗಿದೆ. ಸಪ್ತರ್ಷಿಗಳ ಆಶೀರ್ವಾದವನ್ನು ಪಡೆಯಲು ಮತ್ತು ದೇಶದ ಶಕ್ತಿಯನ್ನು ಕೇಂದ್ರೀಕರಿಸಲು ಈ ಶಂಖ ಪೂಜೆಯನ್ನು ಆಯೋಜಿಸಲಾಗಿತ್ತು.

ಗಣ್ಯರ ಉಪಸ್ಥಿತಿ:

ಈ ಐತಿಹಾಸಿಕ ಕ್ಷಣಕ್ಕೆ ನೇಪಾಳದ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು, ವಿವಿಧ ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳು ಮತ್ತು ಸಮಾಜದ ಪ್ರಮುಖ ಗಣ್ಯರು ಸಾಕ್ಷಿಯಾದರು. ಸಂಪ್ರದಾಯ ಮತ್ತು ರಾಜಕೀಯದ ಈ ಅಪೂರ್ವ ಸಮ್ಮಿಲನವು ನೇಪಾಳದ ಮುಂದಿನ ಪ್ರಧಾನ ಮಂತ್ರಿಗಳ ಉದ್ಘಾಟನಾ ಸಮಾರಂಭಗಳಿಗೆ ಹೊಸ ಮುನ್ನುಡಿ ಬರೆದಿದೆ.

View this post on Instagram

A post shared by 24 Ghanta Nepal (@24ghantanepal)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular