HomeLatest NewsSHOCKING NEWS: ಕಂಠಪೂರ್ತಿ ಕುಡಿದು ಬಂದು ಪತ್ನಿಯ ಅರ್ಧ ತಲೆ ಬೋಳಿಸಿದ ಕಿರಾತಕ ಪತಿ!

SHOCKING NEWS: ಕಂಠಪೂರ್ತಿ ಕುಡಿದು ಬಂದು ಪತ್ನಿಯ ಅರ್ಧ ತಲೆ ಬೋಳಿಸಿದ ಕಿರಾತಕ ಪತಿ!

ಬಾಗಲಕೋಟೆ: ಕಂಠಪೂರ್ತಿ ಕುಡಿದು ಬಂದ ಪತಿ ಮಹಾಶಯನೊಬ್ಬ ಪತ್ನಿಯ ತಲೆಯನ್ನೇ ಬೋಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ನಡೆದಿದೆ.

ಬಸಪ್ಪ ಎಂಬಾತ ಕಂಠಪೂರ್ತಿ ಕುಡಿದು ಬಂದು ಪತ್ನಿ ಶ್ರೀದೇವಿಯ ಜೊತೆ ಜಗಳವಾಡಿದ್ದಾನೆ. ತನ್ನೊಂದಿಗೆ ತನ್ನ ಸ್ನೇಹಿತ ಸದಾಶಿವ ನ್ಯಾಮಗೌಡ ಎಂಬಾತನನ್ನು ಕರೆತಂದಿದ್ದು, ಗಲಾಟೆ ಮಾಡಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಪತ್ನಿಯ ಅರ್ಧತಲೆ ಬೋಳಿಸಿದ್ದಾನೆ. ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿದಿನ ಮದ್ಯಸೇವಿಸಿ ಮನೆಗೆ ಬರುತ್ತಿದ್ದ ಪತಿ ಬಸಪ್ಪ, ಪತಿ ಮೇಲೆ ಹಲ್ಲೆ ನಡೆಸಿ ಹಿಂಸಿಸುತ್ತಿದ್ದ. ಪತಿಯ ಕಾಟಕ್ಕೆ ಬೇಸತ್ತ ಪತ್ನಿ ಶ್ರೀದೇವಿ ಕೆಲದಿನಗಳ ಕಾಲ ತವರು ಮನೆಗೆ ಹೋಗಿದ್ದರು. ಎರಡು ತಿಂಗಳ ಹಿಂದೆ ಮನೆಗೆ ವಾಪಾಸ್ ಆಗಿದ್ದರು. ನಿನ್ನೆ ರಾತ್ರಿ ಸ್ನೇಹಿತನ ಜೊತೆ ಸೇರಿ ಮತ್ತೆ ಕುಡಿದು ಬಂದು ಗಲಾಟೆ ಮಾಡಿರುವ ಪತಿ ಮಹಾಶಯ ಪತ್ನಿ ಮೇಲೆ ಹಲ್ಲೆ ನಡೆಸಿ ಆಕೆಯ ಅರ್ಧತಲೆ ಬೋಳಿಸಿ ವಿಕೃತಿ ಮೆರೆದಿದ್ದಾನೆ. ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular