HomeLive NewsEPFO: ಉದ್ಯೋಗಿಗಳಿಗೆ ಬ್ಯಾಡ್ ನ್ಯೂಸ್..! PF ವೇತನ ಮಿತಿ ಹೆಚ್ಚಳಕ್ಕೆ ಕೇಂದ್ರದಿಂದ ಮಹತ್ವದ ನಿರ್ಧಾರ

EPFO: ಉದ್ಯೋಗಿಗಳಿಗೆ ಬ್ಯಾಡ್ ನ್ಯೂಸ್..! PF ವೇತನ ಮಿತಿ ಹೆಚ್ಚಳಕ್ಕೆ ಕೇಂದ್ರದಿಂದ ಮಹತ್ವದ ನಿರ್ಧಾರ

ಖಾಸಗಿ ವಲಯದ ಉದ್ಯೋಗಿಗಳ ಸಾಮಾಜಿಕ ಭದ್ರತೆಗೆ ಪ್ರಮುಖವಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯ ಪಿಎಫ್ ವೇತನ ಮಿತಿ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಸ್ತುತ ಇರುವ ತಿಂಗಳಿಗೆ ₹15,000 ವೇತನ ಮಿತಿಯನ್ನು ₹25,000ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸದ್ಯಕ್ಕೆ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಇದರಿಂದ ಕೋಟ್ಯಂತರ ಉದ್ಯೋಗಿಗಳಿಗೆ ಹೆಚ್ಚಿನ ಪಿಎಫ್ ಪ್ರಯೋಜನ ಸಿಗುವ ಅವಕಾಶ ಸದ್ಯಕ್ಕೆ ಕೈತಪ್ಪಿದಂತಾಗಿದೆ.

ಕಂಪನಿಗಳ ಮೇಲಿನ ಆರ್ಥಿಕ ಹೊರೆ ತಪ್ಪಿಸಲು ನಿರ್ಧಾರ

ಹೊಸ ಕಾರ್ಮಿಕ ಸಂಹಿತೆ (Labour Code) ಜಾರಿಯಿಂದಲೇ ಕಂಪನಿಗಳ ಮೇಲೆ ಹೆಚ್ಚುವರಿ ವೆಚ್ಚದ ಹೊರೆ ಬಿದ್ದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇಂತಹ ಸಂದರ್ಭದಲ್ಲಿ ಪಿಎಫ್ ವೇತನ ಮಿತಿಯನ್ನೂ ಹೆಚ್ಚಿಸಿದರೆ ಉದ್ಯಮಗಳ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ಉಂಟಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ವಿಶೇಷವಾಗಿ ಐಟಿ ಕ್ಷೇತ್ರದ ಕಂಪನಿಗಳು ಹೊಸ ನಿಯಮಗಳ ಅನುಷ್ಠಾನಕ್ಕಾಗಿ ಈಗಾಗಲೇ ನೂರಾರು ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚ ಮಾಡಿವೆ. ಆದ್ದರಿಂದ ಎಲ್ಲಾ ಸಂಬಂಧಿತ ಪಕ್ಷಗಳ (Stakeholders) ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

₹15,000 ವೇತನ ಮಿತಿಯ ಹಿನ್ನೆಲೆ ಏನು?

2014ರಿಂದ ಪಿಎಫ್ ಲೆಕ್ಕಾಚಾರಕ್ಕೆ ಮೂಲ ವೇತನದ ಮಿತಿಯನ್ನು ₹15,000 ಆಗಿಯೇ ನಿಗದಿಪಡಿಸಲಾಗಿದೆ.

ನಿಯಮದ ಪ್ರಕಾರ:

  • ಉದ್ಯೋಗಿಯ ಮೂಲ ವೇತನದಿಂದ 12%
  • ಉದ್ಯೋಗದಾತರಿಂದ 12%

ಹೀಗೆ ಒಟ್ಟು ಮೊತ್ತ ಪಿಎಫ್ ಖಾತೆಗೆ ಜಮೆಯಾಗುತ್ತದೆ.

₹15,000 ಮಿತಿಯ ಆಧಾರದ ಮೇಲೆ ನೋಡಿದರೆ, ತಿಂಗಳಿಗೆ ಗರಿಷ್ಠ ₹1,800 ಕಡ್ಡಾಯವಾಗಿ ಪಿಎಫ್ ಖಾತೆಗೆ ಜಮೆಯಾಗುತ್ತದೆ.

ಒಂದು ವೇಳೆ ಈ ಮಿತಿಯನ್ನು ₹25,000ಕ್ಕೆ ಏರಿಸಿದರೆ, ತಿಂಗಳಿಗೆ ಕಡ್ಡಾಯ ಪಿಎಫ್ ಕೊಡುಗೆ ₹3,000ಕ್ಕೆ ಏರಿಕೆಯಾಗಲಿದೆ. ಈ ಹೆಚ್ಚುವರಿ ಮೊತ್ತವನ್ನು ಭರಿಸಲು ಕಂಪನಿಗಳು ಸಿದ್ಧವಿಲ್ಲದಿರುವುದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

ಕಾರ್ಮಿಕ ಸಂಘಟನೆಗಳ ಬಹುಕಾಲದ ಬೇಡಿಕೆ

ಮೆಟ್ರೋ ನಗರಗಳಲ್ಲಿ ಸಾಮಾನ್ಯ ಕಾರ್ಮಿಕರ ವೇತನವೂ ಈಗ ₹15,000 ಮೀರಿರುವುದರಿಂದ, ಅನೇಕ ಉದ್ಯೋಗಿಗಳು ಪಿಎಫ್ ವ್ಯಾಪ್ತಿಯಿಂದ ಹೊರಗುಳಿಯುತ್ತಿದ್ದಾರೆ. ಹೀಗಾಗಿ ವೇತನ ಮಿತಿಯನ್ನು ₹25,000ಕ್ಕೆ ಏರಿಸಬೇಕೆಂದು ಕಾರ್ಮಿಕ ಸಂಘಟನೆಗಳು ಬಹುಕಾಲದಿಂದ ಆಗ್ರಹಿಸುತ್ತಿವೆ.

ವೇತನ ಮಿತಿ ಹೆಚ್ಚಾದರೆ ಏನು ಲಾಭ?

ಕಾರ್ಮಿಕ ಇಲಾಖೆಯ ಆಂತರಿಕ ಅಂದಾಜಿನ ಪ್ರಕಾರ, ವೇತನ ಮಿತಿಯನ್ನು ₹25,000ಕ್ಕೆ ಹೆಚ್ಚಿಸಿದರೆ ದೇಶದಲ್ಲಿ ಹೊಸದಾಗಿ 1 ಕೋಟಿಗೂ ಹೆಚ್ಚು ಕಾರ್ಮಿಕರು ಪಿಎಫ್ ಹಾಗೂ ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಬರಲಿದ್ದಾರೆ. ಪ್ರಸ್ತುತ EPFOಯಲ್ಲಿ ಸುಮಾರು 8 ಕೋಟಿ ಸಕ್ರಿಯ ಸದಸ್ಯರು ಇದ್ದು, ಸಂಸ್ಥೆಯ ಬಳಿ ₹27–28 ಲಕ್ಷ ಕೋಟಿ ನಿಧಿ ಸಂಗ್ರಹವಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular