HomeEntertainment'ಬ್ಯಾಕ್ ಬೆಂಚರ್ಸ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಬ್ಯಾಕ್ ಬೆಂಚರ್ಸ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಬ್ಯಾಕ್ ಬೆಂಚರ್ಸ್’  ಚಿತ್ರದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ”ನಮ್ ಕಥೆ ಶುರು ಆಗೋದ್” ಇಲ್ಲಿಂದ ಎಂಬ ಈ ಹಾಡಿಗೆ ಚಂದನ್ ಶೆಟ್ಟಿ ಧ್ವನಿಯಾಗಿದ್ದು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ.

ರಾಜಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ರಂಜನ್ ನರಸಿಂಹಮೂರ್ತಿ, ಜತಿನ್ ಆರ್ಯನ್, ಆಕಾಶ್ ಎಂ.ಪಿ., ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಮಾನ್ಯ ಗೌಡ, ಮನೋಜ್ ಶೆಟ್ಟಿ, ಅನುಷಾ ಸುರೇಶ್, ಚತುರ್ಥಿರಾಜ್, ವಿಕಾಸ್ ತೆರೆ ಹಂಚಿಕೊಂಡಿದ್ದು, ಪಿಪಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಮ್ಯಾ ನಿರ್ಮಾಣ ಮಾಡಿದ್ದಾರೆ. ರಂಜನ್ ನರಸಿಂಹಮೂರ್ತಿ ಮತ್ತು ಅಮರ್ ಗೌಡ ಸಂಕಲನವಿದ್ದು, ಮನೋಹರ್ ಜೋಶಿ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular